ಹರಪನಹಳ್ಳಿ ತಾಲೂಕಿನ ಕಂಚೀಕೆರೆ ಗ್ರಾಮದ ಕೋಡಿ ಸಿದ್ಧೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಿತು. ಶ್ರೀಶೈಲ ಜಗದ್ಗುರು ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಮಡಿವಾಳ ಸಮಾಜದ ಜಿಲ್ಲಾಧ್ಯಕ್ಷ ಯರಬಳ್ಳಿ ಉಮಾಪತಿ, ರೆಡ್ಡಿ ಶಾಂತಕುಮಾರ್, ಗ್ರಾಪಂ ಅಧ್ಯಕ್ಷೆ ಹಳ್ಳಿಕೆರೆ ನೀಲಮ್ಮ, ಉಪಾಧ್ಯಕ್ಷೆ ತನುಜಾ, ಬಿದಿರಿ ಸುನೀಲ, ಶಂಕರ ಪಾಟೀಲ್ ಇತರರಿದ್ದರು. 
ಜಿಲ್ಲೆ

ಸಾಮೂಹಿಕ ವಿವಾಹದಿಂದ ಬಡವರಿಗೆ ಅನುಕೂಲ

ಹರಪನಹಳ್ಳಿ: ಉಚಿತ ಸಾಮೂಹಿಕ ಮದುವೆಗಳನ್ನು ಮಾಡುವುದು ಪುಣ್ಯದ ಕೆಲಸವಾಗಿದೆ ಎಂದು ಶಿರಹಟ್ಟಿ-ಬಾಲೆಹೊಸೂರಿನ ನಿರಂಜನ ಜಗದ್ಗುರು ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

ತಾಲೂಕಿನ ಕಂಚೀಕೆರೆ ಗ್ರಾಮದ ಕೋಡಿ ಸಿದ್ಧೇಶ್ವರ ದೇವಸ್ಥಾನದಲ್ಲಿ ಬಿದ್ರಿ ರೇವಣಸಿದ್ದಪ್ಪ ಸ್ಮರಣಾರ್ಥ ಆಯೋಜಿಸಿದ್ದ 25ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಸಾಮೂಹಿಕ ವಿವಾಹಗಳು ಹೆಚ್ಚು ನಡೆಯುವುದರಿಂದ ಬಡವರಿಗೆ ಅನುಕೂಲಕಲವಾಗಲಿದೆ ಎಂದರು.

ಶಾಸಕಿ ಎಂ ಪಿ ಲತಾ ಮಲ್ಲಿಕಾರ್ಜುನ ಮಾತನಾಡಿ, ಸಾಮೂಹಿಕ ವಿವಾಹಗಳಿಂದ ಬಡವರಿಗೆ ಮದುವೆಯ ಹೊರೆ ತಪ್ಪಿಸಿದಂತಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಮದುವೆಯ ಖರ್ಚು-ವೆಚ್ಚಗಳು ಮಿತಿಮೀರುತ್ತಿವೆ ಎಂದರು. ಪ್ರಮುಖರಾದ ವೆಂಕಟೇಶ ರಾಮ್‌ರೆಡ್ಡಿ, ಜಿ.ಚಿದಾನಂದ, ಜಾತಪ್ಪ, ತೋಪಲಿ ಹಾಲೇಶ, ರಾಮಚಂದ್ರಪ್ಪ, ಪರಶುರಾಮ ಇತರರಿದ್ದರು.