ಜಿಲ್ಲೆ

ಲ್ಯಾಪ್‌ಟಾಪ್ ಸದ್ಬಳಕೆಗೆ ಶಾಸಕರ ಸಲಹೆ

Davanagere

ಹರಪನಹಳ್ಳಿ: ಪದವಿ ವಿದ್ಯಾರ್ಥಿಗಳು ಸರ್ಕಾರ ನೀಡಿರುವ ಉಚಿತ ಲ್ಯಾಪ್‌ಟಾಪ್‌ಗಳ ಸದುಪಯೋಗ ಪಡೆದು ಶೈಕ್ಷಣಿಕ ಸಾಧನೆ ಮಾಡಬೇಕು ಎಂದು ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ, ಶಾಸಕ ಜಿ.ಕರುಣಾಕರರೆಡ್ಡಿ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಶುಕ್ರವಾರ 2019-20ನೇ ಸಾಲಿನ ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ವಿತರಿಸಿ ಮಾತನಾಡಿದರು.

ಕಾಲೇಜಿಗೆ 610 ಲ್ಯಾಪ್‌ಟಾಪ್ ಬಂದಿವೆ. ಇವುಗಳ ವಿತರಣೆ ಸಮಾರಂಭವನ್ನು ಮಾರ್ಚ್ ತಿಂಗಳಲ್ಲಿ ಅದ್ದೂರಿಯಾಗಿ ಆಯೋಜಿಸಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಂದಲೇ ಲ್ಯಾಪ್ ಕೊಡಿಸುವ ಯೋಜನೆ ಇತ್ತು. ಕೋವಿಡ್ ಕಾರಣ ಕಾರ್ಯಕ್ರಮ ರದ್ದು ಮಾಡಬೇಕಾಯಿತು ಎಂದು ತಿಳಿಸಿದರು.

ತಾಪಂ ಉಪಾಧ್ಯಕ್ಷ ಮಂಜ್ಯಾನಾಯ್ಕ, ಪುರಸಭೆ ಸದಸ್ಯರಾದ ಹಾಲೇಶಪ್ಪ, ಜಾವೀದ್, ಬಿಜೆಪಿ ಮುಖಂಡ ಲೋಕೇಶ್, ಹಳೆಯ ವಿದ್ಯಾರ್ಥಿಗಳ ಸಂಘದ ಖಜಾಂಚಿ ರವಿನಾಯ್ಕ, ಕಾಲೇಜು ಪ್ರಾಂಶುಪಾಲ ಡಾ.ಷಣ್ಮುಖನಗೌಡ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಇದ್ದರು.