ಹರಪನಹಳ್ಳಿಯ ಎಚ್‌ಪಿಎಸ್ ಕಾಲೇಜು ಮೈದಾನದಲ್ಲಿ ಏ.10ರಂದು ನಡೆಯಲಿರುವ ಕಾರ್ಯಕ್ರಮದ ವೇದಿಕೆಯನ್ನು ಶಾಸಕ ಜಿ.ಕರುಣಾಕರರೆಡ್ಡಿ ಪರಿಶೀಲಿಸಿದರು. 
ಜಿಲ್ಲೆ

ಹರಪನಹಳ್ಳಿಗೆ ಸಿಎಂ ಆಗಮನ 10ರಂದು

Ballari

ಹರಪನಹಳ್ಳಿ: ಪಟ್ಟಣದ ಎಚ್‌ಪಿಎಸ್ ಕಾಲೇಜು ಮೈದಾನದಲ್ಲಿ ಏ.10 ರಂದು ಶ್ರೀ ಸೀತಾರಾಮಕಲ್ಯಾಣ ಮಹೋತ್ಸವ ಹಾಗೂ ಶಾಸಕ ಜಿ.ಕರುಣಾಕರರೆಡ್ಡಿ 60ನೇ ವರ್ಷದ ಜನ್ಮ ದಿನದ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸಲಿದ್ದಾರೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಸತ್ತೂರು ಹಾಲೇಶ ತಿಳಿಸಿದರು.

ಪಟ್ಟಣದ ಜಗಜೀವನರಾಮ್ ಸಮುದಾಯ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಅಂದು ಬೆಳಗ್ಗೆ 8.30ಕ್ಕೆ ದೇವರತಿಮಲಾಪುರ ಗ್ರಾಮದ ಲಕ್ಷ್ಮೀವೆಂಕಟೇಶ್ವರ ದೇವಸ್ಥಾನದಲ್ಲಿ ಶಾಸಕ ಜಿ.ಕರುಣಾಕರರೆಡ್ಡಿ ವಿಶೇಷ ಪೂಜೆ ಸಲ್ಲಿಸಿ ನಂತರ ಗೋ ಪೂಜೆ ಸಲ್ಲಿಸುವರು. 10.30ಕ್ಕೆ ಎಚ್‌ಪಿಎಸ್ ಕಾಲೇಜಿನ ಮೈದಾನದಲ್ಲಿ ಲೋಕಕಲ್ಯಾಣಕ್ಕಾಗಿ ಸೀತರಾಮ ಕಲ್ಯಾಣ ಮಹೋತ್ಸವ ನಡೆಯುವುದು. ನಂತರ ಶಾಸಕ ಕರುಣಾಕರರೆಡ್ಡಿ ಅವರ ಷಷ್ಟೃಬ್ದಿ ಕಾರ್ಯಕ್ರಮ ನಡೆಯಲಿದೆ ಎಂದರು.

ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು, ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ, ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ, ದಾವಣಗೆರೆ ಸಂಸದ ಸಿದ್ದೇಶ್ವರ, ಬಳ್ಳಾರಿ ಸಂಸದ ವೈ.ದೇವೇಂದ್ರಪ್ಪ, ಮಾಜಿ ಸಚಿವ ಜನಾರ್ದನರೆಡ್ಡಿ, ಬಳ್ಳಾರಿ ಶಾಸಕ ಜಿ.ಸೋಮಶೇಖರರೆಡ್ಡಿ ಇತರರು ಭಾಗಿಯಾಗುವರು ಎಂದರು.

ಈ ಸಂದರ್ಭ ಬಿಜೆಪಿ ಮುಖಂಡ ಎಂ.ಪಿ.ನಾಯ್ಕ, ಪುರಸಭಾ ಅಧ್ಯಕ್ಷ ಮಂಜುನಾಥ ಇಜಂತಕರ್, ಪುರಸಭಾ ಸದಸ್ಯರಾದ ರೊಕ್ಕಪ್ಪ, ಜಾವೇದ್, ತಾ.ಪಂ ಮಾಜಿ ಉಪಾದ್ಯಕ್ಷ ಮಂಜನಾಯ್ಕ, ಮುಖಂಡರಾದ ರಾಘವೇಂದ್ರಶೆಟ್ಟಿ, ಆರ್.ಲೋಕೇಶ, ಕರೇಗೌಡ, ಕಣವಿಹಳ್ಳಿ ಮಂಜುನಾಥ, ಲಿಂಬ್ಚಾನಾಯ್ಕ, ಬಿ.ವೈ.ವೆಂಕಟೇಶನಾಯ್ಕ, ಉದಯಕುಮಾರ, ಕಲ್ಲೇರ ಬಸವರಾಜ, ಯು.ಪಿ.ನಾಗರಾಜ ಇತರರು ಇದ್ದರು.