ಹರಪನಹಳ್ಳಿಯ ಕೋಟೆ ಆಂಜನೇಯ ದೇವಸ್ಥಾನದ ಬಳಿ ಬಿಡಾಡಿ ದನಗಳಿಗೆ ಮೇವು ಹಾಕಿದ ಭಜರಂಗ ದಳ, ವಿಶ್ವ ಹಿಂದು ಪರಿಷತ್ ಕಾರ್ಯಕರ್ತರು. 
ಜಿಲ್ಲೆ

ಬಿಡಾಡಿ ದನಗಳಿಗೆ ಮೇವು

Davanagere

ಹರಪನಹಳ್ಳಿ: ಇಲ್ಲಿನ ವಿಶ್ವ ಹಿಂದು ಪರಿಷತ್ ಹಾಗೂ ಭಜರಂಗ ದಳ ಕಾರ್ಯಕರ್ತರು ಬಿಡಾಡಿ ದನಗಳಿಗೆ ಮೇವು ನೀಡುವ ಮೂಲಕ ಬಸವೇಶ್ವರರ ಜಯಂತಿ ಆಚರಿಸಿದರು.

ಲಾಕ್‌ಡೌನ್ ಹಿನ್ನೆಲೆಯಲ್ಲಿ ಕಳೆದ 23 ದಿನಗಳಿಂದ ನಿರಾಶ್ರಿತರು, ಪೊಲೀಸ್, ಹೋಂಗಾರ್ಡ್ ಇತರ ಸಿಬ್ಬಂದಿಗೆ ಉಪಾಹಾರ, ಊಟ ವಿತರಿಸಿದ್ದರು. ಸೋಮವಾರ ಪಟ್ಟಣದ ಬಸ್‌ನಿಲ್ದಾಣ, ಹರಿಹರ ವೃತ್ತ, ಹೊಸಪೇಟೆ ರಸ್ತೆ ಮತ್ತಿತರೆಡೆ ಬಿಡಾಡಿ ದನಗಳಿಗೆ ಮೇವು ಹಾಕಿದರು.

ಜಿ.ಅಶೋಕ, ಅಶೋಕ ಹಿಂದೂಸ್ತಾನಿ, ಭರತ್ ಬೂದಿ, ಕೆ.ಸಂಗಮೇಶ್, ಟಿ.ನಾಗರಾಜ, ನರಸಿಂಹ, ಎಚ್.ಎಂ.ಜಗದೀಶ, ಹನುಮಂತ, ಎಚ್.ಎಂ.ಶರತ್, ವೆಂಕಟೇಶ್, ಹನುಮಂತ ದ್ಯಾಮಜ್ಜಿ, ಅಭಿ ಪೂಜಾರ್, ಛತ್ರಪತಿ ಹಾಲೇಶ್, ವರುಣ್, ಎಂ.ವಾಗೀಶ್, ಶಂಬಣ್ಣ ಇತರರಿದ್ದರು.