ಹರಪನಹಳ್ಳಿ ತಾಲೂಕಿನ ತಿಪ್ಪನಾಯಕನಹಳ್ಳಿಯ ಆಂಜನೇಯ ಸ್ವಾಮಿ ಹಾಗೂ ಬಸವೇಶ್ವರ ದೇವಸ್ಥಾನದ ಕಲಶಾರೋಹಣ ಕಾರ್ಯಕ್ರಮವನ್ನು ಉಜ್ಜಿನಿ ಸದ್ಧರ್ಮ ಪೀಠದ ಜಗದ್ಗುರು ಸಿದ್ದಲಿಂಗ ರಾಜ ದೇಶಿಕೇಂದ್ರ ಶಿವಾಚಾರ್ಯರು ಉದ್ಘಾಟಿಸಿದರು. ಸದ್ಗುರು ಶಿವಯೋಗಿ ವೀರಗಂಗಾಧರ ಹಾಲಸ್ವಾಮಿಗಳು, ಮುತ್ತಿಗಿ ಗುರು ಮಠದ ಹಾಲಯ್ಯ ಸ್ವಾಮಿಗಳು, ದಾನ ಚಿಂತಾಮಣಿ ಲಲಿತಮ್ಮ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನುಷಾ ನಾಗರಾಜ್ ಇತರರಿದ್ದರು. 
ಜಿಲ್ಲೆ

ಸನಾತನ ಪರಂಪರೆ ಕಾರ್ಯಗಳು ನಿರಂತರ ನಡೆಯಲಿ

ಹರಪನಹಳ್ಳಿ: ಸಮಾಜದಲ್ಲಿ ಜಾತೀಯತೆಯ ಮೌಢ್ಯ ತಾಂಡವವಾಡುತ್ತಿದೆ. ಎಲ್ಲ ಸಮುದಾಯಗಳ ಒಗ್ಗಟ್ಟಿನಿಂದ ಧಾರ್ಮಿಕ ಕಾರ್ಯಗಳ ಆಯೋಜನೆ ಸಾಧ್ಯವೆಂದು ಉಜ್ಜಿನಿ ಸದ್ಧರ್ಮ ಪೀಠದ ಜಗದ್ಗುರು ಸಿದ್ದಲಿಂಗ ರಾಜ ದೇಶಿಕೇಂದ್ರ ಶಿವಾಚಾರ್ಯರು ತಿಳಿಸಿದರು.

ತಿಪ್ಪನಾಯಕನಹಳ್ಳಿಯ ಆಂಜನೇಯ ಸ್ವಾಮಿ ಹಾಗೂ ಬಸವೇಶ್ವರ ದೇವಸ್ಥಾನದ ಕಲಶಾರೋಹಣ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶುಕ್ರವಾರ ಮಾತನಾಡಿದರು. ಸನಾತನ ಧರ್ಮದ ಉಳಿವಿಗೆ ಧಾರ್ಮಿಕ ಕಾರ್ಯಗಳು ನಿರಂತರವಾಗಿ ನಡೆಯಬೇಕು. ಭವಿಷ್ಯದ ಪೀಳಿಗೆಗೆ ಸನಾತನ ಧರ್ಮದ ಮಹತ್ವ ತಿಳಿಸಲು ದೇವಸ್ಥಾನಗಳ ನಿರ್ಮಾಣ ಆಗಬೇಕು. ಯುವ ಪೀಳಿಗೆ ಗುರು ಹಿರಿಯರನ್ನು ಗೌರವಿಸುವ ಸದ್ಗುಣಗಳನ್ನು ಬೆಳೆಸಿಕೊಳ್ಳಬೇಕು. ತಂದೆ-ತಾಯಿಯನ್ನು ಪ್ರೀತಿಯಿಂದ ಚೆನ್ನಾಗಿ ನೋಡಿಕೊಂಡಲ್ಲಿ ಬದುಕು ಹಸನಾಗುತ್ತದೆ ಎಂದರು.

ಗ್ರಾಪಂ ಸದಸ್ಯರಾದ ಕೆ ದುರ್ಗಮ್ಮ, ಮಂಜುನಾಥ, ಕೊಟ್ರೇಶ್, ಎಚ್.ಪಕ್ಕೀರಪ್ಪ, ಜಿ.ನಾಗಪ್ಪ, ಮಂಜುನಾಥ ಡಿ., ಹನುಮಂತಪ್ಪ, ಅಂಜಿನಪ್ಪ, ಕೆ.ಪ್ರಕಾಶ್, ಕುಸುಮಾ, ಮಂಜುನಾಥ, ಶಿವಾನಂದ ಇತರರಿದ್ದರು.