ಜಿಲ್ಲೆ

ಲೋಕ ಅದಾಲತ್‌&, 1,444 ಪ್ರಕರಣಗಳು ಇತ್ಯರ್ಥ

ಹರಪನಹಳ್ಳಿ: ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯಗಳಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಕೌಟುಂಬಿಕ ಕಲಹ, ಕ್ರಿಮಿನಲ್ ಮೊಕದ್ದಮೆಗಳು, ಮೋಟಾರು ವಾಹನ, ರಸ್ತೆ ಅಪಘಾತ, ಸಹಕಾರಿ ಬ್ಯಾಕ್‌ಗಳು, ನಿವೇಶನ ಮಾರಾಟ ಸೇರಿ ಒಟ್ಟು 1,749ರ ಪೈಕಿ 1,444 ಪ್ರಕರಣಗಳು ಇತ್ಯರ್ಥಗೊಂಡವು.

ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ನ್ಯಾಯಾಧೀಶೆ ಉಷಾರಾಣಿ ಆರ್. ನೇತೃತ್ವದಲ್ಲಿ ಒಟ್ಟು 845ರ ಪೈಕಿ 679 ಪ್ರಕರಣಗಳನ್ನು 18,09,2860 ರೂ. ಹಣದ ರೂಪದಲ್ಲಿ ಇತ್ಯರ್ಥಪಡಿಸಲಾಯಿತು. ಜೆಎಂಎಫ್ ಕೋರ್ಟ್‌ನಲ್ಲಿ ನ್ಯಾಯಾಧೀಶ ಮನುಶರ್ಮ ಎಸ್.ಪಿ. ಅವರು, 904 ಪ್ರಕರಣಗಳನ್ನು ಕೈಗೆತ್ತಿಕೊಂಡು 765 ಪ್ರಕರಣಗಳನ್ನು 84,90,490 ರೂ. ಹಣದ ರೂಪದಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸಿದರು.