ವಿಧಾನ ಪರಿಷತ್ ಸದಸ್ಯ ಹಾರಕೂಡ ಶ್ರೀಮಠಕ್ಕೆ ಆಗಮಿಸಿದ ಎಂ.ಜಿ.ಮುಳೆ ಅವರನ್ನು ಪೀಠಾಧಿಪತಿ ಶ್ರೀ ಡಾ.ಚನ್ನವೀರ ಶಿವಾಚಾರ್ಯರು ಸತ್ಕರಿಸಿ ಆಶೀರ್ವದಿಸಿದರು. ಬಿ.ಕೆ. ಹಿರೇಮಠ, ಪಂಚಾಕ್ಷರಿ ಹಿರೇಮಠ, ರವಿ ಕೋಳಕೂರ, ಮಲ್ಲಿನಾಥ ಹಿರೇಮಠ ಹಾರಕೂಡ, ಅಂಬರಾಯ ಉಗಾಜಿ, ಶರಣಯ್ಯ ಸ್ವಾಮಿ, ಮಲ್ಲಿಕಾರ್ಜುನ ಅಲಗುಡೆ, ಅರ್ಜುನ ಬಿರಾದಾರ ಅಪ್ಪಣ್ಣ ಜನವಾಡ ಇತರÀರಿದ್ದರು. 
ಜಿಲ್ಲೆ

ಜನ ಸೇವೆಯೇ ನನ್ನ ಮಂತ್ರ

ರಾಜು ಯಮಕನಮರಡಿ

ಬಸವಕಲ್ಯಾಣ: ಅಭಿವೃದ್ಧಿಯೇ ನನ್ನ ಧ್ಯೇಯ, ಜನಸೇವೆಯೇ ನನ್ನ ಮಂತ್ರ. ಕೊನೆ ಉಸಿರು ಇರುವವರೆಗೆ ಕ್ಷೇತ್ರದ ಜನತೆಯ ಸೇವೆ ಮಾಡುತ್ತೇನೆ. ಸೇವೆಗಾಗಿ ಬಾಳುವುದೇ ನನ್ನ ಸಿದ್ಧಾಂತ ಎಂದು ಎಂಎಲ್ಸಿ ಎಂ.ಜಿ.ಮುಳೆ ಹೇಳಿದರು.

ಹಾರಕೂಡ ಶ್ರೀಮಠದಿಂದ ಸೋಮವಾರ ಗೌರವ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು, ತ್ಯಾಗ ಮತ್ತು ಸೇವೆ ನಮ್ಮ ದೇಶದ ಆದರ್ಶವೂ ಹೌದು, ಹಾರಕೂಡ ಶ್ರೀಮಠದ ಜೀವನಾಡಿಯೂ ಹೌದು, ಪೂಜ್ಯ ಶ್ರೀ ಡಾ. ಚನ್ನವೀರ ಶಿವಾಚಾರ್ಯರ ಆಶೀರ್ವಾದದಿಂದ ಇಂದು ನಾನು ವಿಧಾನ ಪರಿಷತ್ ಸದಸ್ಯನಾಗಿದ್ದೇನೆ. ಪೂಜ್ಯರ ಆದರ್ಶ ಪರಂಪರೆಯಲ್ಲಿ ಕ್ಷೇತ್ರದ ಜನತೆಯ ಕಲ್ಯಾಣಕ್ಕಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದರು.

ಶ್ರೀಮಠದ ಪೀಠಾಧಿಪತಿ ಶ್ರೀ ಡಾ.ಚನ್ನವೀರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಜಿಪಂ ನಿವೃತ್ತ ಉಪ ಕಾರ್ಯದರ್ಶಿ ಬಿ.ಕೆ. ಹಿರೇಮಠ, ಪಂಚಾಕ್ಷರಿ ಹಿರೇಮಠ, ಮುಖಂಡರಾದ ರವಿ ಕೋಳಕೂರ, ಮಲ್ಲಿನಾಥ ಹಿರೇಮಠ ಹಾರಕೂಡ, ಶರಣಯ್ಯ ಸ್ವಾಮಿ, ಮಲ್ಲಿಕಾರ್ಜುನ ಅಲಗುಡೆ, ಅರ್ಜುನ ಬಿರಾದಾರ ಸರಜವಳಗಾ, ಅಪ್ಪಣ್ಣ ಜನವಾಡ ಇತರರಿದ್ದರು. ಮಲ್ಲಿನಾಥ ಹಿರೇಮಠ ಸ್ವಾಗತಿಸಿದರು. ಅಂಬರಾಯ ಉಗಾಜಿ ನಿರೂಪಣೆ ಮಾಡಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ತಿಕ ಸ್ವಾಮಿ ಯಲದಗುಂಡಿ ಪ್ರಾರ್ಥನಾ ಗೀತೆ ನಡೆಸಿಕೊಟ್ಟರು.