ಜಿಲ್ಲೆ

ಸೋಮವಾರಪೇಟೆಯಲ್ಲಿ ಹರ್‌ಘರ್ ತಿರಂಗ ಅಭಿಯಾನ

ಎ. ಆರ್. ರಘುರಾಮ
  • ಸೋಮವಾರಪೇಟೆ : ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಬಿಜೆಪಿ ಮಂಡಲದ ವತಿಯಿಂದ ಹರ್‌ಘರ್ ತಿರಂಗ ಅಭಿಯಾನದ ಜಾಗೃತಿ ನಿಮಿತ್ತ ಮಂಗಳವಾರ ಬೈಕ್ ಜಾಥಾ ನಡೆಯಿತು.
    ಕಕ್ಕೆಹೊಳೆಯಿಂದ ಹೊರಟ ಯುವಕರ ಬೈಕ್ ಜಾಥಾ, ಆನೆಕೆರೆ ಮಾರ್ಗವಾಗಿ ಜೇಸಿ ವೇದಿಕೆಯ ಮೂಲಕ ಕಕ್ಕೆಹೊಳೆ ಜಂಕ್ಷನ್‌ನಲ್ಲಿ ಸಮಾಪನಗೊಂಡಿತು. 80 ಕ್ಕೂ ಅಧಿಕ ಬೈಕ್‌ಗಳಲ್ಲಿ ಆಗಮಿಸಿದ್ದ ನೂರಾರು ಯುವಕರು ದೇಶಭಕ್ತಿ ಜಾಗೃತಿ ಮೂಡಿಸುವ ಘೋಷಣೆ ಕೂಗಿದರು. ಮಾಜಿ ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ಯುವಕರಲ್ಲಿ ದೇಶಭಕ್ತಿ ಜಾಗೃತಿ ಮೂಡಿಸುವ ಕೆಲಸವನ್ನು ಬಿಜೆಪಿ ಅತ್ಯಂತ ಶ್ರದ್ಧೆಯಿಂದ ಮಾಡುತ್ತಿದೆ ಎಂದರು.ಆ.14 ಮತ್ತು 15ರಂದು ಎಲ್ಲರ ಮನೆ ಮೇಲೆ ತ್ರಿವರ್ಣ ಧ್ವಜ (ತಿರಂಗ) ಹಾರಿಸುವ ಮೂಲಕ ದೇಶಭಕ್ತಿಯನ್ನು ಬಿಂಬಿಸಬೇಕಿದೆ. ಬಾಂಗ್ಲಾದಲ್ಲಿ ಹಿಂದುಗಳ ಮೇಲೆ ಆಗುತ್ತಿರುವ ಅನ್ಯಾಯವನ್ನು ತಡೆದು ಆ ದೇಶವನ್ನು ಅಖಂಡ ಭಾರತದ ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಂಡರೆ ಶಾಂತಿ ನೆಲೆಸುತ್ತದೆ ಎಂದರು. ಬಾಂಗ್ಲಾದೇಶವನ್ನು ವಶಮಾಡಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವನ್ನು ಈ ಸಂದರ್ಭ ಒತ್ತಾಯಿಸುವುದಾಗಿ ಅಪ್ಪಚ್ಚು ರಂಜನ್ ಹೇಳಿದರು.