ಕಡಬ: ಪಿಎಂ ಆವಾಸ್ ಯೋಜನೆ ಫಲಾನುಭವಿಗಳ ಮನೆಗಳಲ್ಲಿ ಹರ್ ಘರ್ ತಿರಂಗ ಕಾರ್ಯಕ್ರಮಕ್ಕೆ ಸಂಸದ ಕ್ಯಾ.ಬ್ರಿಜೇಶ್ ಚೌಟರಿಂದ ವಿಭಿನ್ನ ಪರಿಕಲ್ಪನೆಯ ಅಭಿಯಾನಕ್ಕೆ ಬುಧವಾರ ಚಾಲನೆ ನೀಡಿದರು.
ಸವಣೂರು ಗ್ರಾಮದ ಬಸ್ತಿ ನಿವಾಸಿ ಗಂಗಮ್ಮ ಸುಬ್ಬಣ್ಣ ಅವರ ಮನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಆಶಯದಂತೆ ಸಂಸದ ಕ್ಯಾ.ಬ್ರಿಜೇಶ್ ಚೌಟ ತ್ರಿವರ್ಣ ಧ್ವಜ ಹಾರಿಸಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ರಾಕೇಶ್ ರೈ ಕೆಡೆಂಜಿ, ಜಿಲ್ಲಾ ಬಿಜೆಪಿ ಕೋಶಾಧಿಕಾರಿ ಸಂಜಯ ಪ್ರಭು, ಜಿಲ್ಲಾ ಮಾಧ್ಯಮ ವಕ್ತಾರ ವಸಂತ ಪೂಜಾರಿ, ಸುಳ್ಯ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರದೀಪ್ ರೈ ಮನವಳಿಕೆ, ಸವಣೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಂದರಿ ಬಿ.ಎಸ್., ಉಪಾಧ್ಯಕ್ಷೆ ಜಯಶ್ರೀ, ಸುಳ್ಯ ಮಂಡಲ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಇಂದಿರಾ ಬಿ.ಕೆ., ಸುಳ್ಯ ಮಂಡಲ ಎಸ್.ಟಿ.ಮೋರ್ಚಾ ಅಧ್ಯಕ್ಷ ಗಂಗಾಧರ ಪೆರಿಯಡ್ಕ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ದಿನೇಶ್ ಮೆದು, ಪುಣ್ಚಪಾಡಿ ಶಕ್ತಿ ಕೇಂದ್ರ ಪ್ರಮುಖ್ ಮಹೇಶ್ ಕೆ.ಸವಣೂರು ಬೂತ್ ಸಮಿತಿ ಅಧ್ಯಕ್ಷರಾದ ತೀರ್ಥರಾಮ ಕೆಡೆಂಜಿ, ರಾಜ್ ದೀಪಕ್ ಶೆಟ್ಟಿ ಮಠ, ಪ್ರಮುಖರಾದ ಗಿರಿಶಂಕರ ಸುಲಾಯ, ಚಂದ್ರಾವತಿ ಸುಣ್ಣಾಜೆ, ರಾಜೀವಿ ಶೆಟ್ಟಿ, ಕೀರ್ತನ್, ಅಶೋಕ್ ಅಡ್ಕಾರು ಮೊದಲಾದವರಿದ್ದರು.