ರಾಯಬಾಗ: ತಾಲೂಕಿನ ಸವಸುದ್ದಿ ಗ್ರಾಮದ ವಕೀಲ ಸಂತೋಷ ಪಾಟೀಲ ಹತ್ಯೆ ಮಾಡಿದವರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ಕೋರ್ಟ್ ಕಲಾಪದಿಂದ ವಕೀಲರು ಹೊರಗುಳಿದು, ಅಂಬೇಡ್ಕರ್ ವೃತ್ತ ತಡೆ ನಡೆಸಿ ಬಳಿಕ ಅಥಣಿ ಡಿವೈಎಸ್‌ಪಿ ಪ್ರಶಾಂತ ಮುನ್ನೊಳ್ಳಿ ಮತ್ತು ಗ್ರೇಡ್-2 ತಹಸೀಲ್ದಾರ್ ಪರಮಾನಂದ ಮಂಗಸೂಳಿ ಅವರಿಗೆ ವಕೀಲರ ಸಂಘದ ಸದಸ್ಯರು ಮಂಗಳವಾರ ಮನವಿ ಸಲ್ಲಿಸಿದರು.
ವಕೀಲರ ಸಂಘದ ಅಧ್ಯಕ್ಷ ಪಿ.ಎಂ.ದರೂರ ಮಾತನಾಡಿ, ವಕೀಲ ಸಂತೋಷ ಪಾಟೀಲ ಹತ್ಯೆಗೈದವರನ್ನು ಬಂಧಿಸುವಂತೆ ಎರಡು ದಿನಗಳಿಂದ ಹೋರಾಟ ನಡೆಸುತ್ತಿದ್ದರೂ, ಇದೂವರೆಗೂ ಬಂಧಿಸಿಲ್ಲ. ಕೂಡಲೇ ಬಂಧಿಸದಿದ್ದರೆ ತೀವ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ವಕೀಲ ಎಲ್.ಬಿ.ಚೌಗುಲೆ ಮಾತನಾಡಿ, ಈಗಿರುವ ಪೊಲೀಸ್ ತನಿಖಾಧಿಕಾರಿ ಬದಲಿಸಿ, ಬೇರೆ ತನಿಖಾಧಿಕಾರಿ ನೇಮಿಸಬೇಕೆಂದು ಮನವಿ ಮಾಡಿದರು.
ಎಸ್.ವಿ.ಪೂಜಾರಿ, ಎಸ್.ಬಿ. ಬಿರಾದಾರಪಾಟೀಲ, ಬಿ.ಕೆ.ಶಿಂಗಾಡೆ, ಯು.ಎನ್.ಉಮ್ರಾಣಿ, ವಕೀಲರಾದ ಎ.ಬಿ.ಮಂಗಸೂಳೆ, ಪಿ.ಐ.ಸವದತ್ತಿ, ವಿ.ಜಿ.ಖವಟಕೊಪ್ಪ, ಪಿ.ಎಂ.ಪಾಟೀಲ, ಆರ್.ಜಿ.ಕುಲಕರ್ಣಿ ಇತರರಿದ್ದರು.