ಜಿಲ್ಲೆ

ವಿದ್ಯಾರ್ಥಿ ಜೀವನದಲ್ಲಿ ಖುಷಿ ಅಗತ್ಯ

ಮರಿದೇವ ಹೂಗಾರ

ಹುಬ್ಬಳ್ಳಿ: ಇಲ್ಲಿನ ಜೆ.ಸಿ. ನಗರದ ಎಸ್​ಜೆಎಂವಿಎಸ್ ಕಲಾ ಹಾಗೂ ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಏರ್ಪಡಿಸಿರುವ ಸಖಿ ಸಂಭ್ರಮಕ್ಕೆ ಗುರುವಾರ ಚಾಲನೆ ನೀಡಲಾಯಿತು.

ಬ್ಯಾನರ್ ಅನಾವರಣಗೊಳಿಸುವ ಮೂಲಕ ಸಖಿ ಸಂಭ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಿಎ ಉತ್ತೀರ್ಣರಾಗಿರುವ ಹಳೆ ವಿದ್ಯಾರ್ಥಿನಿ ಪೂಜಾ ಕರವೀರ ಶೆಟ್ಟರ್, ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ಖುಷಿ ಅತ್ಯಗತ್ಯ ಎಂದರು.

ಪ್ರಾಚಾರ್ಯು ಸಿಸಿಲಿಯಾ ಡಿಕ್ರೂಜ್ ಮಾತನಾಡಿ, ವಿದ್ಯಾರ್ಥಿನಿಯರು ಈ ಮೂರು ದಿನಗಳ ಸಖಿ ಸಂಭ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಬೇಕು ಎಂದು ತಿಳಿಸಿದರು.

ಕಲಾ ವಿಭಾಗದ ಪ್ರಧಾನ ಕಾರ್ಯದರ್ಶಿ ವೈಷ್ಣವಿ ಕುಲಕರ್ಣಿ ಮತ್ತು ವಾಣಿಜ್ಯ ವಿಭಾಗದ ಪ್ರಧಾನ ಕಾರ್ಯದರ್ಶಿ ರತಿಕಾ ಭುರೇ ಅವರು ಪಾರಿವಾಳಗಳನ್ನು ಆಕಾಶದತ್ತ ಹಾರಿಬಿಟ್ಟರು. ವಿದ್ಯಾರ್ಥಿಗಳಿಗಾಗಿ ಮೂರು ದಿನಗಳವರೆಗೆ ವಿವಿಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

ಡಾ. ರಘು ಅಕಮಂಚಿ, ಶಿವಕುಮಾರ ಬನ್ನಿಹಟ್ಟಿ, ಡಾ.ತಾಯಣ್ಣ ಎಚ್., ಶಿವಲೀಲಾ ವೈಜೀನಾಥ, ವಿಜಯಲಕ್ಷ್ಮೀ, ತೇಜಸ್ವಿನಿ ದುಂಡೂರ, ವಿಜಯಲಕ್ಷ್ಮೀ ಅಕ್ಕಿ ಇತರರು ಇದ್ದರು.