ಹಿರೇಕೆರೂರ ಪಟ್ಟಣದ ಮಂಜುನಾಥ ನಗರದ ಮಂಜುನಾಥ ದೇವಸ್ಥಾನದಲ್ಲಿ ಶ್ರಾವಣ ಮಾಸದ ಕಡೇ ಸೋಮವಾರ ನಿಮಿತ್ತ ಭಕ್ತರಿಗೆ ಏರ್ಪಡಿಸಿದ್ದ ಅನ್ನ ಸಂತರ್ಪಣೆ ಕಾರ್ಯಕ್ರಮಕ್ಕೆ ಸಿಪಿಐ ಬಸವರಾಜ ಪಿ.ಎಸ್., ಚಾಲನೆ ನೀಡಿದರು.  
ಜಿಲ್ಲೆ

ದೇವರ ನಾಮಸ್ಮರಣೆಯಿಂದ ಸುಖ-ಶಾಂತಿ

ಹಿರೇಕೆರೂರ: ದೇವರ ನಾಮಸ್ಮರಣೆಯಿಂದ ಮಾತ್ರ ಜೀವನದಲ್ಲಿ ಸುಖ- ಶಾಂತಿ ದೊರಕಲು ಸಾಧ್ಯ ಎಂದು ಸಿಪಿಐ ಬಸವರಾಜ ಪಿ.ಎಸ್., ಹೇಳಿದರು.

ಪಟ್ಟಣದ ಮಂಜುನಾಥ ನಗರದ ಮಂಜುನಾಥ ದೇವಸ್ಥಾನದಲ್ಲಿ ಶ್ರಾವಣ ಮಾಸದ ಕಡೇ ಸೋಮವಾರ ನಿಮಿತ್ತ ಭಕ್ತರಿಗೆ ಏರ್ಪಡಿಸಿದ್ದ ಅನ್ನ ಸಂತರ್ಪಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ದೇವರು ಒಂದು ನಾಮ ಹಲವು. ಆದರೆ, ಆಚರಣೆ ಮಾತ್ರ ಬೇರೆ ಬೇರೆಯಾಗಿವೆ. ಇಂದು ಧರ್ಮದ ತಳಹದಿಯಲ್ಲಿ ಬದುಕುತ್ತಿರುವ ಮನುಷ್ಯರಿಗೆ ಭಯ, ಭಕ್ತಿ, ಶ್ರದ್ಧೆ, ನಂಬಿಕೆ ಮೂಡಿಸುವಲ್ಲಿ ದೇವಸ್ಥಾನಗಳು ಮೂಂಚೂಣಿಯಲ್ಲಿವೆ ಎಂದರು.

ಪಪಂ ಸದಸ್ಯ ರಮೇಶ ತೋರಣಗಟ್ಟಿ ಮಾತನಾಡಿ, ಇಸ್ರೋ ವಿಜ್ಞಾನಿಗಳು ಚಂದ್ರಯಾನ ಯಶಸ್ವಿಗಾಗಿ ದೇವರ ಮೊರೆ ಹೋಗಿದ್ದರು. ದೇಶದಲ್ಲಿ ಪ್ರತಿಯೊಂದು ದೇವರ ಕ್ಷೇತ್ರಗಳು ಒಂದಿಲ್ಲೊಂದು ಪವಾಡ, ಧಾರ್ಮಿಕತೆಯನ್ನು ಹೊಂದುವ ಮೂಲಕ ಅಪಾರ ಭಕ್ತ ಸಮೂಹವನ್ನು ತಮ್ಮತ್ತ ಸೆಳೆಯುತ್ತಿವೆ ಎಂದರು.

ಇದಕ್ಕೂ ಮೊದಲು ದೇವರಿಗೆ ಜಯದೇವಶಾಸ್ತ್ರೀ ಮಠದ ಅವರಿಂದ ರುದ್ರಾಭಿಷೇಕ, ಹೂವಿನ ಅಲಂಕಾರ ಪೂಜೆ, ತೀರ್ಥ ಪ್ರಸಾದ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆದವು.

ದೇವಸ್ಥಾನ ಸಮಿತಿಯ ಜಯಣ್ಣ ಗುಡಿಗದ್ದಿ, ಮಲ್ಲನಗೌಡ ಮುದಿಗೌಡ್ರ, ಜಯಣ್ಣ ಮಾರೇರ, ಈಶಪ್ಪ ಭರಮಗೌಡ್ರ, ಬಸವರಾಜ ಗೊಡಚಿಕೊಂಡ, ಮಾರುತಿ ಸುಣಗಾರ, ಶಂಭು ಕಡೇಹಳ್ಳಿ, ಹಾಲೇಶಪಪ್ಪ ಕೋಡಿಹಳ್ಳಿ, ಸೋಮಶೇಖರ ಗಂಟೇರ, ಈಶಪ್ಪ ಒಡೆಯನಪುರ, ಜಗದೀಶ ಹುಲ್ಲಿನಕೊಪ್ಪ, ಮನೋಜ ಗುಡಿಗದ್ದಿ, ಭಕ್ತರು ಇದ್ದರು.