ಜಿಲ್ಲೆ

ಕೌದಳ್ಳಿಯಲ್ಲಿ ದಂಡಿನ ಮಾರಮ್ಮ ದೇಗುಲ ಉದ್ಘಾಟನೆ

reportermys

ಹನೂರು: ತಾಲೂಕಿನ ಕೌದಳ್ಳಿ ಗ್ರಾಮದಲ್ಲಿ ಶುಕ್ರವಾರ ದಂಡಿನ ಮಾರಮ್ಮ ದೇವಸ್ಥಾನ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಆರ್.ನರೇಂದ್ರ ಭಾಗವಹಿಸಿದ್ದರು.


ನೂತನವಾಗಿ ನಿರ್ಮಿಸಿರುವ ದೇಗುಲವನ್ನು ವಿವಿಧ ಪುಷ್ಪ, ತಳಿರು-ತೋರಣಗಳಿಂದ ಸಿಂಗಾರ ಮಾಡಲಾಗಿತ್ತು. ಗೋಪುರಕ್ಕೆ ಕಳಸ ಪ್ರತಿಷ್ಠಾಪಿಸಿದ ಅರ್ಚಕರು, ಹೋಮ ಹವನ ಹಾಗೂ ಇನ್ನಿತರ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ಭಕ್ತರು ದೇವರ ದರ್ಶನವನ್ನು ಪಡೆದರು. ದೇಗುಲದ ವತಿಯಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ದೇಗುಲಕ್ಕೆ ಆಗಮಿಸಿದ ಶಾಸಕರನ್ನು ಗ್ರಾಮಸ್ಥರು ವಾದ್ಯಮೇಳದೊಂದಿಗೆ ಸ್ವಾಗತಿಸಿದರು. ದೇವರ ದರ್ಶನ ಹಾಗೂ ಮಂಗಳಾರತಿ ಪಡೆದ ಶಾಸಕರು, ಪ್ರಸಾದ ಸ್ವೀಕರಿಸಿದರು.


ಈ ವೇಳೆ ಶಾಸಕರು ಮಾತನಾಡಿ, ಈ ಹಿಂದೆ ಗ್ರಾಮಕ್ಕೆ ಆಗಮಿಸಿದ್ದ ವೇಳೆ ದಂಡಿನ ಮಾರಮ್ಮನ ಕಲ್ಲಿನ ಮೂರ್ತಿಯು ಛಾವಡಿ ಕಟ್ಟೆಯಲ್ಲಿತ್ತು. ಇದರಿಂದ ಪೂಜೆ ಪುನಸ್ಕಾರ ನೆರವೇರಿಸಲು ತೊಂದರೆಯಾಗಿತ್ತು. ಹೀಗಾಗಿ ದೇಗುಲ ನಿರ್ಮಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದರು. ಈ ದಿಸೆಯಲ್ಲಿ ಕೊಡುಗೆಯಾಗಿ ದೇಗುಲ ನಿರ್ಮಿಸಲಾಗಿದ್ದು, ಆ ತಾಯಿಯ ಕೃಪೆ ಸರ್ವರ ಮೇಲಿರಲಿ ಎಂದು ಪ್ರಾರ್ಥಿಸಿದರು.


ಪಪಂ ಉಪಾಧ್ಯಕ್ಷ ಗಿರೀಶ್, ಸದಸ್ಯ ಹರೀಶ್‌ಕುಮಾರ್, ರಾಜ್ಯ ಯೂತ್ ಕಾಂಗ್ರೆಸ್ ಕಾರ್ಯದರ್ಶಿ ಚೇತನ್ ದೊರೆರಾಜು, ಮುಖಂಡರಾದ ಚಿಕ್ಕತಮ್ಮಯ್ಯ, ವೆಂಕಟರಮಣನಾಯ್ಡು, ರಂಗಸ್ವಾಮಿ, ಗೋವಿಂದರಾಜು, ವೆಂಕಟೇಶ್, ಪಳನಿಸ್ವಾಮಿ, ಕುಮಾರ್, ಶ್ರೀನಿವಾಸ್, ಮಣಿ ಇದ್ದರು.