ಜಿಲ್ಲೆ

ಆರ್‌ಟಿಸಿಗೆ ಆಧಾರ್ ಜೋಡಿಸುವಂತೆ ಮನವಿ

ಕಿರಣ್ ಮಾದರಹಳ್ಳಿ

ಹನೂರು: ರೈತರ ಜಮೀನಿನ ಆರ್‌ಟಿಸಿಗೆ ಆಧಾರ್ ನಂಬರ್ ಜೋಡಿಸಲಾಗುತ್ತಿದ್ದು, ಅರ್ಹರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ತಹಸೀಲ್ದಾರ್ ವೈ.ಕೆ ಗುರುಪ್ರಸಾದ್ ತಿಳಿಸಿದ್ದಾರೆ.

ತಾಲೂಕಿನಲ್ಲಿ 88,167 ಭೂ ಮಾಲೀಕರ ಆರ್‌ಟಿಸಿಯನ್ನು ಇಕೆವೈಸಿ ಮೂಲಕ ಆಧಾರ್ ನಂಬರ್ ಜೋಡಿಸುವ ಕಾರ್ಯವನ್ನು ಸಂಬಂಧಪಟ್ಟ ಗ್ರಾಮ ಆಡಳಿತ ಅಧಿಕಾರಿಗಳು ಒಂದು ವಾರದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಕಾರ್ಯದಲ್ಲಿ ಭೂ ಮಾಲೀಕರು ತಮ್ಮ ಆರ್‌ಟಿಸಿಗೆ ಆಧಾರ್ ಜೋಡಣೆಯಾಗಿರುವ ಮೊಬೈಲ್ ನಂಬರ್‌ನೊಂದಿಗೆ ಗ್ರಾಮ ಆಡಳಿತಾಧಿಕಾರಿಗಳನ್ನು ಸಂಪರ್ಕಿಸಿ ಪ್ರಯೋಜನ ಪಡೆದುಕೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.