ಜಿಲ್ಲೆ

ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವನ ಬಂಧನ

ಕಿರಣ್ ಮಾದರಹಳ್ಳಿ

ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಮನೆಯೊಂದರ ಮೇಲೆ ಭಾನುವಾರ ಪೊಲೀಸರು ದಾಳಿ ನಡೆಸಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಮಹಿಳೆಯನ್ನು ಬಂಧಿಸಿದ್ದಾರೆ.

ಮಹದೇಶ್ವರಬೆಟ್ಟದ ಊರಬಸಪ್ಪನ ಒಡ್ಡಿನ ನಿವಾಸಿ ವೆಂಕಟಲಕ್ಷ್ಮಿ(37) ಬಂಧಿತೆ. ಭೀಮನ ಅಮಾವಾಸ್ಯೆ ಹಿನ್ನೆಲೆ ಮಹದೇಶ್ವರ ಬೆಟ್ಟಕ್ಕೆ ಹೆಚ್ಚಿನ ಜನರು ಆಗಮಿಸುವುದರಿಂದ ಸಾಲೂರು ಬೃಹನ್ಮಠದ ಮುಖ್ಯ ರಸ್ತೆ ಬದಿಯಲ್ಲಿನ ಮನೆಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದರು.

ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಬೆಳಗ್ಗೆ 10.30ರ ವೇಳೆಯಲ್ಲಿ ಮಲೆಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ನಂಜುಂಡಸ್ವಾಮಿ, ಸಿಬ್ಬಂದಿ ಚೇತನ್‌ಕುಮಾರ್, ರಮೇಶ್‌ಕುಮಾರ್ ಹಾಗೂ ಲಕ್ಕಮ್ಮ ತಂಡ ದಾಳಿ ನಡೆಸಿ 9,428 ರೂ ಮೌಲ್ಯದ ವಿವಿಧ ಕಂಪನಿಯ 22.50 ಲೀಟರ್ ಮದ್ಯವನ್ನು ವಶಕ್ಕೆ ಪಡೆದು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಪಡೆದಿದ್ದಾರೆ.