ಹನೂರು: ನಾವು ಯಾರ ಒತ್ತಡಕ್ಕೂ ಮಣಿಯದೆ ಮತದಾನ ಮಾಡಲು ಹೋಗಿರಲಿಲ್ಲ. ಸ್ವ ಇಚ್ಛೆಯಿಂದ ಮತದಾನ ಮಾಡಲು ಹೋಗಿದ್ದೆವು ಎಂದು ಮೆಂದಾರೆ ಗ್ರಾಮಸ್ಥ ಬೇರ ಹೇಳಿದರು.
ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಇಂಡಿಗನತ್ತ ಗ್ರಾಮದಲ್ಲಿ ಲೋಕಸಭೆ ಚುನಾವಣೆ ಮತದಾನದ ದಿನ ನಡೆದ ಮತಗಟ್ಟೆ ಧ್ವಂಸ ಪ್ರಕರಣದ ಪರಿಣಾಮದ ಕುರಿತು ವಿಜಯವಾಣಿಯೊಂದಿಗೆ ಅವರು ಮಾತನಾಡಿದರು. ಸರ್ಕಾರ ಮಾತ್ರ ನಮಗೆ ಎಲ್ಲವನ್ನೂ ನೀಡುವುದು. ಈ ಹಿನ್ನೆಲೆಯಲ್ಲಿ ಮತದಾನ ಮಾಡುವುದು ನಮ್ಮ ಕರ್ತವ್ಯ. ಆದರೆ, ಈಗಿನ ಪರಿಸ್ಥಿತಿಯಲ್ಲಿ ಇಲ್ಲಿ ಇರಲು ಇಷ್ಟವಾಗುತ್ತಿಲ್ಲ. ನಮ್ಮನ್ನು ಪಾಲಾರ್‌ಗೆ ಸ್ಥಳಾಂತರ ಮಾಡಬೇಕು ಎಂದರು.