ಜಿಲ್ಲೆ

ಇಂಡಿಗನತ್ತ ಗ್ರಾಮಕ್ಕೆ ಡಿವೈಎಸ್ಪಿ ಭೇಟಿ

ಕಿರಣ್ ಮಾದರಹಳ್ಳಿ

ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟ ತಪ್ಪಲಿನ ಇಂಡಿಗನತ್ತ ಹಾಗೂ ಮೆಂದಾರೆ ಗ್ರಾಮಕ್ಕೆ ಇತ್ತೀಚೆಗೆ ಬೆಂಗಳೂರು ಡಿವೈಎಸ್ಪಿ ಎಚ್.ಕೆ.ಮಹಾನಂದ ಕೃಷ್ಣಸ್ವಾಮಿ ಅವರು ಭೇಟಿ ನೀಡಿ ಘಟನೆ ಸಂಬಂಧ ಮಾಹಿತಿ ಪಡೆದು ಗ್ರಾಮಸ್ಥರಿಗೆ ಧೈರ್ಯ ಹೇಳಿದರು.

ಘಟನೆಯಿಂದಾಗಿ ಇಲ್ಲಿನ ಜನರು ತುಂಬಾ ತೊಂದರೆ ಅನುಭವಿಸುತ್ತಿರುವುದು ತಿಳಿದಿದೆ. ಆದರೂ ಯಾರೂ ಮನಸ್ತಾಪ ಮಾಡಿಕೊಳ್ಳದೇ ಎಂದಿನಂತೆ ಸಹಬಾಳ್ವೆ, ಶಾಂತಿ, ಸೌಹಾರ್ದತೆಯಿಂದ ಜೀವನ ನಡೆಸಬೇಕು. ಜಿಲ್ಲಾಡಳಿತ ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಿದೆ. ಆದ್ದರಿಂದ ದೃತಿಗೆಡುವ ಅಗತ್ಯವಿಲ್ಲ. ಈ ಭಾಗದ ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸಾಲೂರು ಶ್ರೀಗಳ ಆಶೀರ್ವಾದ ಹಾಗೂ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಕಣ್ಣಿನ ಉಚಿತ ತಪಾಸಣಾ ಶಿಬಿರ ಹಾಗೂ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಬೆಂಗಳೂರು ಜಿಎಸ್‌ಟಿ ಆಯುಕ್ತ ರಮೇಶ್‌ಕುಮಾರ್, ಗ್ರಾಮದ ಮುಖಂಡರಾದ ಕಣ್ಣನ್, ರಾಜು ಹಾಗೂ ಇನ್ನಿತರರು ಇದ್ದರು.