ಹನೂರು: ತಾಲೂಕಿನ ಹೊಸೂರುದೊಡ್ಡಿ ಗ್ರಾಮದ ಜಮೀನೊಂದಕ್ಕೆ ಶನಿವಾರ ರಾತ್ರಿ ಕಾಡಾನೆಗಳು ಲಗ್ಗೆ ಇಟ್ಟು ಮುಸುಕಿನ ಜೋಳದ ಫಸಲನ್ನು ತಿಂದು ನಾಶಗೊಳಿಸಿದೆ.
ಗ್ರಾಮದ ಗೋವಿಂದನಾಯ್ಕ ಎಂಬುವರ 2 ಎಕರೆ ಜಮೀನಿನಲ್ಲಿ ಮುಸುಕಿನ ಜೋಳ ಬೆಳೆಯಲಾಗಿತ್ತು. ಫಸಲು ಕಟಾವಿನ ಹಂತಕ್ಕೆ ಬಂದಿತ್ತು. ಕಾಡಾನೆಗಳು ಜಮೀನಿಗೆ ಲಗ್ಗೆಯಿಟ್ಟು ಫಸಲನ್ನು ನಾಶಗೊಳಿಸಿವೆ. ಸಂಬಂಧಪಟ್ಟ ಅಧಿಕಾರಿಗಳು ಜಮೀನಿಗೆ ಭೇಟಿ ನೀಡಿ ಪರಿಶೀಲಿಸಿ ಸರ್ಕಾರದಿಂದ ಸೂಕ್ತ ಪರಿಹಾರ ದೊರಕಿಸಿಕೊಡುವಂತೆ ಗೋವಿಂದನಾಯ್ಕ ಒತ್ತಾಯಿಸಿದ್ದಾರೆ.