ಹನೂರು: ತಾಲೂಕಿನ ಜೀರಿಗೆಗದ್ದೆ ಗ್ರಾಮದಲ್ಲಿ ಮನೆಯ ಹಿಂಭಾಗದ ಹಿತ್ತಲಿನಲ್ಲಿ ಗಾಂಜಾ ಬೆಳೆದಿದ್ದವನನ್ನು ಹನೂರು ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಜೀರಿಗೆಗದ್ದೆ ಗ್ರಾಮದ ಮಾದೇಶ (35) ಬಂಧಿತ. ಈತ ಮನೆಯ ಹಿತ್ತಲಿನಲ್ಲಿ ಗಾಂಜಾ ಗಿಡಗಳನ್ನು ಬೆಳೆದಿದ್ದನು. ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಎಸ್ಪಿ ಪದ್ಮಿನಿ ಸಾಹೂ ಹಾಗೂ ಡಿವೈಎಸ್ಪಿ ಸೋಮೇಗೌಡ ಅವರ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್ ಶಶಿಕುಮಾರ್ ನೇತೃತ್ವದಲ್ಲಿ ಸಬ್ ಇನ್ಸ್‌ಪೆಕ್ಟರ್ ಮಂಜುನಾಥ್ ಪ್ರಸಾದ್ ಹಾಗೂ ಸಿಬ್ಬಂದಿ ದಾಳಿ ನಡೆಸಿ, ಒಟ್ಟು 14 ಕೆ.ಜಿ ತೂಕವುಳ್ಳ 10 ಗಾಂಜಾ ಗಿಡಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಯಿತು. ಈ ಸಂಬಂಧ ಹನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾಳಿಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರಕಾಶ್, ಎಎಸ್‌ಐ ಶಿವಕುಮಾರ್, ಮುಖ್ಯ ಪೇದೆಗಳಾದ ದೊಡ್ಡವೀರಶೆಟ್ಟಿ, ಚಂದ್ರು, ಪೇದೆಗಳಾದ ಶಿವಕುಮಾರ್, ರಾಘವೇಂದ್ರ, ರಾಜು, ರಾಮಕೃಷ್ಣ ಹಾಗೂ ಶಶಿಕುಮಾರ್ ಭಾಗವಹಿಸಿದ್ದರು.