ಜಿಲ್ಲೆ

ಕ್ರಿಸ್ತರಾಜ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರಶಸ್ತಿ

ಕಿರಣ್ ಮಾದರಹಳ್ಳಿ

ಹನೂರು: ಪಟ್ಟಣದ ಶ್ರೀ ಮಹದೇಶ್ವರ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಹನೂರಿನ ಕ್ರಿಸ್ತರಾಜ ಕಾಲೇಜಿನ ವಿದ್ಯಾರ್ಥಿಗಳು ವಿವಿಧ ಕ್ರೀಡೆಗಳಲ್ಲಿ ಜಯಗಳಿಸಿದ್ದಾರೆ.

ಬಾಲಕರ ವಿಭಾಗದ ಖೋ-ಖೋದಲ್ಲಿ ಮಹದೇವ ತಂಡ, ಬಾಲ್ ಬ್ಯಾಡ್ಮಿಂಟನ್‌ನಲ್ಲಿ ಅನಂತ್ ತಂಡ ಹಾಗೂ 4್ಡ400 ರಿಲೆಯಲ್ಲಿ ಲವನ್ ತಂಡ, 4್ಡ100 ರಿಲೆಯಲ್ಲಿ ಮಹದೇವ ತಂಡ ಪ್ರಥಮ ಸ್ಥಾನ ಪಡೆದಿದೆ. ಷಟಲ್ ಬ್ಯಾಡ್ಮಿಂಟನ್‌ನಲ್ಲಿ ಯೋಗೇಶ್ವರ್ ತಂಡ, ಥ್ರೋ ಬಾಲ್‌ನಲ್ಲಿ ಸಿದ್ದೇಶ್ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಇನ್ನು 3,000 ಹಾಗೂ 1,500 ಮೀಟರ್ ಓಟ ಹಾಗೂ ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ಮಹೇಂದ್ರ ಪ್ರಥಮ ಸ್ಥಾನ ಪಡೆದು ವೈಯಕ್ತಿಯ ಚಾಂಪಿಯನ್ ಪ್ರಶಸ್ತಿ ಪಡೆದಿದ್ದಾನೆ. 400 ಮೀ ಓಟದಲ್ಲಿ ಅನಿಲ್ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಬಾಲಕಿಯರ ವಿಭಾಗದ ಖೋ-ಖೋದಲ್ಲಿ ಪವಿತ್ರಾ ತಂಡ, ಬಾಲ್ ಬ್ಯಾಡ್ಮಿಂಟನ್‌ನಲ್ಲಿ ಆಶಾ ತಂಡ ಹಾಗೂ 4್ಡ100 ಮೀ ರಿಲೆಯಲ್ಲಿ ಕಾವ್ಯಾ ತಂಡ, 4್ಡ400 ಮೀ ರಿಲೆಯಲ್ಲಿ ಕೀರ್ತನಾ ತಂಡ ಪ್ರಥಮ ಸ್ಥಾನ. ಥ್ರೋ ಬಾಲ್‌ನಲ್ಲಿ ನಾಝೀಮಾ ತಂಡ ದ್ವಿತೀಯ ಸ್ಥಾನ ಪಡೆದಿದೆ. ಹಾಗೆಯೇ 400 ಮೀಟರ್ ಓಟದಲ್ಲಿ ಕಾವ್ಯಾ ಪ್ರಥಮ, 100 ಮೀ.ನಲ್ಲಿ ಬಾನು ಹಾಗೂ 800 ಮೀ.ನಲ್ಲಿ ಕಾವ್ಯಾ ದ್ವಿತೀಯ ಸ್ಥಾನ ಪಡೆದಿದ್ದಾರೆ. ಸಾಧಕ ವಿದ್ಯಾರ್ಥಿಗಳನ್ನು ಸಂಸ್ಥೆಯ ವ್ಯವಸ್ಥಾಪಕ ಫಾದರ್ ರೋಷನ್, ಪ್ರಾಂಶುಪಾಲೆ ಸಿಸ್ಟರ್ ಜಾನ್ ಶಾಂತಿ, ತರಬೇತುದಾರ ವಿನೋದ್, ಉಪನ್ಯಾಸಕರಾದ ಪ್ರಕಾಶ್, ಸೋಮಣ್ಣ, ಪವಿತ್ರಾ, ಮುತ್ತು ಅಭಿನಂದಿಸಿದ್ದಾರೆ.