ಹನೂರು: ಪಟ್ಟಣದ ಶ್ರೀ ಆಂಜನೇಯಸ್ವಾಮಿ ದೇಗುಲದಲ್ಲಿ ಶನಿವಾರ ಮಹಾವಿಷ್ಣು ಹಾಗೂ ನವಗ್ರಹ ಮೂರ್ತಿಗಳ ವಾರ್ಷಿಕ ಮಂಡಲ ಪೂಜೆಯನ್ನು ನೆರವೇರಿಸಲಾಯಿತು.
ದೇಗುಲವನ್ನು ವಿವಿಧ ಪುಷ್ಪ ಹಾಗೂ ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಬೆಳಗ್ಗೆ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಮಹಾಗಣಪತಿ ಪೂಜೆ, ಕಳಶ ಆರಾಧನೆ, ನವಗ್ರಹ ಹಾಗೂ ಮಹಾವಿಷ್ಣು ಪೂಜೆ ನೆರವೇರಿಸಲಾಯಿತು. ನವಗ್ರಹ ಹೋಮ, ಪುರುಷ ಸೂಕ್ತ ಹೋಮ, ಶ್ರೀರಾಮ ಪರಿಹಾರ ಹೋಮ ನಡೆದವು. ಪೂರ್ಣಾಹುತಿಯ ನಂತರ ದೇವರಿಗೆ ಫಲ ಪಂಚಾಮೃತ ಅಭಿಷೇಕ, ಅಷ್ಟೋತ್ತರ ನೈವೇದ್ಯ ಅರ್ಪಿಸಿ ಮಹಾ ಮಂಗಳಾರತಿ ಸಲ್ಲಿಸಲಾಯಿತು. ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮದ ಜನರು ದೇವರ ದರ್ಶನ ಪಡೆದರು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.