ಜಿಲ್ಲೆ

ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ

ಕಿರಣ್ ಮಾದರಹಳ್ಳಿ

ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟ ತಪ್ಪಲಿನ ಗೊರಸಾಣೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ 78ನೇ ಸ್ವಾತಂತ್ರೃ ದಿನ ಆಚರಿಸಲಾಯಿತು.

ಮುಖ್ಯಶಿಕ್ಷಕ ಪ್ರಕಾಶ್ ಧ್ವಜಾರೋಹಣ ಮಾಡಿದರು. ಬಳಿಕ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ವಿವಿಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಶಿಕ್ಷಕರಾದ ರಂಗಸ್ವಾಮಿ, ಮಹೇಶ್, ಚಾಂದ್‌ಪಾಷ, ಲಿಯಾಖತ್ ಆಲಿಖಾನ್, ಸೋಮಶೇಖರ್, ವೆಂಕಟೇಶ್, ಧನಂ, ದಿವ್ಯಾ, ಕೀರ್ತಿ, ಮುಖಂಡರಾದ ಮಹಾದೇವು, ಬೆಳ್ಳಿತಂಬಡಿ, ಭೀಮರಾವ್ ಇತರರು ಇದ್ದರು.