ಜಿಲ್ಲೆ

ತಾರ್ಕಿಕ ಚಿಂತನ ಪ್ರವೃತ್ತಿ ರೂಢಿಸಿಕೊಳ್ಳಿ

ಕಿರಣ್ ಮಾದರಹಳ್ಳಿ

ಹನೂರು: ತಾಲೂಕಿನ ಮಾರ್ಟಳ್ಳಿ ಸೇಂಟ್ ಮೇರಿಸ್ ಪ್ರೌಢಶಾಲೆಗೆ ಸೋಮವಾರ ಇಸ್ರೋ ನಿವೃತ್ತ ವಿಜ್ಞಾನಿಗಳಾದ ಡಾ. ಹಿರಿಯಣ್ಣ ಹಾಗೂ ಡಾ. ವಿ. ಚಂದ್ರಬಾಬು ಭೇಟಿ ನೀಡಿ ವಿದ್ಯಾರ್ಥಿಗಳಿಗೆ ವಿಜ್ಞಾನ ಹಾಗೂ ಗಣಿತದ ಮಹತ್ವವನ್ನು ತಿಳಿಸಿಕೊಟ್ಟರು.

ಶಾಲೆಯಲ್ಲಿ ಆಯೋಜಿಸಿದ್ಧ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ದಿನನಿತ್ಯ ಬಳಕೆಯ ಗಣಿತ, ವಿಜ್ಞಾನದ ಚಟುವಟಿಕೆಗಳು, ಅವಿಷ್ಕಾರಗಳು ಹಾಗೂ ಉಪಗ್ರಹಗಳ ಕಾರ್ಯವಿಧಾನದ ಬಗ್ಗೆ ಸಂವಾದ ನಡೆಸಿಕೊಟ್ಟರು. ಈ ಸಂದರ್ಭ ಮಾತನಾಡಿದ ವಿಜ್ಞಾನಿ ಡಾ. ಹಿರಿಯಣ್ಣ, ಪ್ರತಿಯೊಬ್ಬರೂ ವಿದ್ಯಾರ್ಥಿಯೂ ತಾರ್ಕಿಕ ಚಿಂತನಾ ಪ್ರವೃತ್ತಿ ರೂಢಿಸಿಕೊಳ್ಳಬೇಕು ಎಂದರು. ಸಂಶೋಧನಾತ್ಮಕ ಮನೋಭಾವದಿಂದ ಮನೋವಿಕಾಸ ಸಾಧ್ಯ. ಈ ಮೂಲಕ ದೇಶಕ್ಕೆ ಮಹೋನ್ನತ ಕೊಡುಗೆ ನೀಡಬಹುದು ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು. ಸಂಸ್ಥೆಯ ವ್ಯವಸ್ಥಾಪಕ ಟೆನ್ನಿ ಕುರಿಯನ್, ಮುಖ್ಯ ಶಿಕ್ಷಕ ಅನ್ನೈನಾದನ್ ಇತರರು ಇದ್ದರು.