ಜಿಲ್ಲೆ

ಬಸ್ ನಿಲ್ದಾಣದಲ್ಲಿ ಕುಸಿದುಬಿದ್ದು ವೃದ್ಧ ಸಾವು

ಕಿರಣ್ ಮಾದರಹಳ್ಳಿ

ಹನೂರು: ತಾಲೂಕಿನ ಕುರಟ್ಟಿ ಹೊಸೂರು ಗ್ರಾಮದ ವೃದ್ಧರೊಬ್ಬರು ಗುರುವಾರ ಸಂಜೆ ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಬಳಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ಗ್ರಾಮದ ಸಿದ್ಧಶೆಟ್ಟಿ (60) ಮೃತರು. ಇವರು ಅನಾರೋಗ್ಯ ನಿಮಿತ್ತ ಸಮೀಪದ ಕಾಮಗೆರೆ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಡಿಸ್ಚಾರ್ಜ್ ಆಗಿ ಸಂಜೆ 5.30ರಲ್ಲಿ ಸಹೋದರಿ ನಾಗಮ್ಮ ಅವರೊಂದಿಗೆ ಗ್ರಾಮಕ್ಕೆ ತೆರಳಲು ಬಸ್‌ನಲ್ಲಿ ಪಟ್ಟಣಕ್ಕೆ ಆಗಮಿಸಿದ್ದರು. ಈ ವೇಳೆ ಇದ್ದಕ್ಕಿಂದಂತೆಯೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಬಳಿಕ ಸ್ಥಳೀಯರು ಮೃತದೇಹವನ್ನು ಗೂಡ್ಸ್ ವಾಹನದ ಮೂಲಕ ಗ್ರಾಮಕ್ಕೆ ಕಳುಹಿಸಿಕೊಟ್ಟರು. ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ.