ಜಿಲ್ಲೆ

ತರಕಾರಿ ಫಸಲು ನಾಶ

ಕಿರಣ್ ಮಾದರಹಳ್ಳಿ

ಹನೂರು: ತಾಲೂಕಿನ ಬೈಲೂರು ಭಾಗದಲ್ಲಿ ಮಂಗಳವಾರ ರಾತ್ರಿ ಕಾಡಾನೆಯೊಂದು ಜಮೀನುಗಳಿಗೆ ಲಗ್ಗೆ ಇಟ್ಟು ತರಕಾರಿ ಫಸಲನ್ನು ನಾಶಪಡಿಸಿದೆ. ಗ್ರಾಮದ ಮಾದೇಶ್ ಹಾಗೂ ಶಂಕರ್ ಅವರು ಜಮೀನಿನಲ್ಲಿ ಬೆಳ್ಳುಳ್ಳಿ, ಬೀನ್ಸ್ ಹಾಗೂ ಈರುಳ್ಳಿ ಬೆಳೆದಿದ್ದರು. ಆದರೆ ರಾತ್ರಿ ಕಾಡಾನೆ ಲಗ್ಗೆ ಇಟ್ಟು ಫಸಲನ್ನು ತುಳಿದು ನಾಶಪಡಿಸಿದ್ದು ನಷ್ಟ ಉಂಟಾಗಿದೆ.