ಹನೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ 2024-29ನೇ ಸಾಲಿನ ಅವಧಿಗೆ ಎಲ್ಲ ಹಂತದ ಚುನಾವಣಾ ಪ್ರಕ್ರಿಯೆಗಳನ್ನು ಕೈಗೊಳ್ಳಲು ಸಂಘದ ಬೈಲಾ ನಿಯಮ 47ರ ಪ್ರಕಾರ ಕರಡು ಮತದಾರರ ಪಟ್ಟಿಯನ್ನು ಹೊರಡಿಸಲು ಸಂಘದ ಸದಸ್ಯರು ಹೆಸರು ನೋಂದಾಯಿಸುವಂತೆ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಗುರುಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಲೂಕಿನ ಎಲ್ಲ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಹಾಗೂ ಸಿಬ್ಬಂದಿ ಪಟ್ಟಿಯನ್ನು ಸರ್ಕಾರಿ ನೌಕರರ ಸಂಘಕ್ಕೆ ಒಳಪಡುವ ಆಯಾ ಇಲಾಖೆಯ ಮುಖ್ಯಸ್ಥರು ತಯಾರಿಸಿ ಅದನ್ನು ಬಟವಾಡೆ ಅಧಿಕಾರಿಯಿಂದ ದೃಢೀಕರಿಸಿ ಜೂ.28 ರೊಳಗೆ ಸಂಘದ ಪ್ರಧಾನ ಕಾರ್ಯದರ್ಶಿಗೆ ಸಲ್ಲಿಸಬೇಕು. ಮಾಹಿತಿಗಾಗಿ ಮೊ.9449937744 ಹಾಗೂ 9113282733 ಸಂಪಕಿಸುವಂತೆ ಕೋರಲಾಗಿದೆ.