ಜಿಲ್ಲೆ

ಎದುರಾಳಿಯಾಗಿದ್ದವರಿಂದ ಆರೋಗ್ಯ ತಪಾಸಣೆ ಮಾಡಿಸಿಕೊಂಡ ಶಾಸಕ..!

ಕಿರಣ್ ಮಾದರಹಳ್ಳಿ

ಹನೂರು: ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಅಂದು ತನ್ನ ವಿರುದ್ಧ ಸ್ಪರ್ಧೆ ಮಾಡಿದ್ದ ಬಿಜೆಪಿ ಅಭ್ಯರ್ಥಿ ಡಾ. ಪ್ರೀತನ್ ನಾಗಪ್ಪ ಅವರಿಂದ ಶಾಸಕ ಎಂ.ಆರ್.ಮಂಜುನಾಥ್ ಮಾಡಿಸಿಕೊಂಡರು.

ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಎಚ್.ಕೆ. ಟ್ರಸ್ಟ್ ವತಿಯಿಂದ ಭಾನುವಾರ ಆಯೋಜಿಸಿದ್ದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಶಾಸಕರಿಗೆ ವೈದ್ಯರಿಂದ ತಪಾಸಣೆ ಮಾಡಿದರು. ವೈದ್ಯರಾಗಿರುವ ಡಾ.ಪ್ರೀತನ್ ನಾಗಪ್ಪ ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹನೂರು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, 3ನೇ ಸ್ಥಾನ ಪಡೆದುಕೊಂಡಿದ್ದರು. ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಎಂ.ಆರ್.ಮಂಜುನಾಥ್ ಗೆಲುವು ಸಾಧಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಇವರಿಬ್ಬರೂ ಒಂದೇ ಕಡೆ ಮುಖಾಮುಖಿಯಾಗಿರುವುದು ಕಡಿಮೆ. ಭಾನುವಾರ ಆಯೋಜಿಸಿದ್ದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿದ್ದರು. ಶಾಸಕ ಎಂ.ಆರ್.ಮಂಜುನಾಥ್‌ಗೆ ಡಾ.ಪ್ರೀತನ್ ಆರೋಗ್ಯ ತಪಾಸಣೆ ನಡೆಸಿ ಗಮನ ಸೆಳೆದರು.