ಹನೂರು: ತಾಲೂಕಿನ ಲೊಕ್ಕನಹಳ್ಳಿ ಬಳಿಯ ಆಂಡಿಪಾಳ್ಯ ಜಮೀನೊಂದರಲ್ಲಿ ಬಿತ್ತನೆಗೆ ಸಂಗ್ರಹಿಸಿ ಇಡಲಾಗಿದ್ದ 4 ಕ್ವಿಂಟಾಲ್ ಬೆಳ್ಳುಳ್ಳಿ ಶುಕ್ರವಾರ ರಾತ್ರಿ ಕಳ್ಳತನವಾಗಿದೆ.
ವಿನೋದ್ ಅವರು ಆಂಡಿಪಾಳ್ಯ ಬಳಿ ಜಮೀನನ್ನು ಹೊಂದಿದ್ದು, ಕಳೆದ ತಿಂಗಳು ತಮಿಳುನಾಡಿನ ಮೆಟ್ಟುಪಾಳ್ಯಂನಿಂದ 20 ಕ್ವಿಂಟಾಲ್ ಬಿತ್ತನೆ ಬೆಳ್ಳುಳ್ಳಿಯನ್ನು ಖರೀದಿಸಿ ಜಮೀನಿನ ಹಿಂಭಾಗದಲ್ಲಿ ಸಂಗ್ರಹಿಸಿಟ್ಟಿದ್ದರು. ಗೇಟ್ ಮುರಿದು ಒಳನುಗ್ಗಿರುವ ಕಳ್ಳರು 4 ಕ್ವಿಂಟಾಲ್ ಬೆಳ್ಳುಳ್ಳಿಯನ್ನು ಕದೊಯ್ದಿದ್ದಾರೆ. ಕಾರ್ಯನಿಮಿತ್ತ ಬೇರೆಡೆಗೆ ತೆರಳಿದ್ದ ವಿನೋದ್ ಶನಿವಾರ ಬೆಳಗ್ಗೆ 7 ಗಂಟೆ ವೇಳೆಗೆ ಜಮೀನಿಗೆ ಆಗಮಿಸಿದ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ವಿನೋದ್ ಹನೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.