ಜಿಲ್ಲೆ

ವಿವಿಧ ಗ್ರಾಮಗಳಿಗೆ ಹನೂರು ತಾಪಂ ಇಒ ಭೇಟಿ

Mysuru - Desk - Yashavanth Kumar N

ಹನೂರು: ಕುಡಿಯುವ ನೀರಿನ ಸಮಸ್ಯೆ ಎದುರಾಗಿರುವ ಸಂಬಂಧ ತಾಲೂಕಿನ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಬುಧವಾರ ತಾಲೂಕು ಪಂಚಾಯಿತಿ ಇಒ ಉಮೇಶ್ ಅವರು ಜನಪ್ರತಿನಿಧಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.

ಗ್ರಾಪಂ ವ್ಯಾಪ್ತಿಯ ಸಂದನಪಾಳ್ಯ, ಸುಳ್ವಾಡಿ, ಅಂತೋಣಿಯರ್ ಕೋವಿಲ್, ತಾಂಡಮೇಡು, ಹಳೇ ಮಾರ್ಟಳ್ಳಿ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ಕುಸಿತದಿಂದ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗಿತ್ತು. ಈ ಸಂಬಂಧ ಶಾಸಕ ಎಂ.ಆರ್. ಮಂಜುನಾಥ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನೀರಿನ ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಈ ದಿಸೆಯಲ್ಲಿ ಗ್ರಾಮಗಳಿಗೆ ತೆರಳಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು, ಕುಡಿಯುವ ನೀರಿನ ಸಮಸ್ಯೆ ಪರಿಶೀಲಿಸಿದರು. ಬೋರ್ ಕೊರೆಸಿ ಪೈಪ್‌ಲೈನ್ ಅಳವಡಿಸಿ ಸಮಸ್ಯೆ ನಿವಾರಿಸಲು ನಿರ್ಧರಿಸಲಾಯಿತು.ಗ್ರಾಪಂ ಅಧ್ಯಕ್ಷ ಇಗ್ನೇಶಿಮುತ್ತು, ಉಪಾಧ್ಯಕ್ಷ ನದಿಯಾ, ಸದಸ್ಯರಾದ ರಾಮಲಿಂಗಂ, ಸುರೇಶ್, ಪಿಡಿಒ ಶಿವಣ್ಣ ಇನ್ನಿತರರು ಇದ್ದರು.