ಜಿಲ್ಲೆ

12ರಂದು ಅಳದಂಗಡಿಯಲ್ಲಿ ಹನುಮೋತ್ಸವ : ಸಂಪತ್ ಬಿ.ಸುವರ್ಣ ಮಾಹಿತಿ

ಸೌಮ್ಯ ಆರ್

ಬೆಳ್ತಂಗಡಿ: ಸಂಸ್ಕಾರ ಭಾರತಿ, ಅಳದಂಗಡಿ ಹನುಮೋತ್ಸವ ಸಮಿತಿ ವತಿಯಿಂದ ಏ.12ರಂದು ಅಳದಂಗಡಿ ಶ್ರೀ ಸತ್ಯದೇವತಾ ಮೈದಾನದಲ್ಲಿ ಹನುಮೋತ್ಸವ-2025 ಹನುಮ ಸಹಸ್ರ ಕದಳಿ ಯಾಗ, ಲಂಕಾ ದಹನ ದೃಶ್ಯರೂಪಕ, ಭಜನೋತ್ಸವ ಸಾಮೂಹಿಕ ಹನುಮಾನ್ ಚಾಲಿಸಾ ಪಠಣ, ಮಹಾಭಿ ವಂದ್ಯ ಕಾರ್ಯಕ್ರಮದೊಂದಿಗೆ ನಡೆಯಲಿದೆ ಎಂದು ಸಂಸ್ಕಾರ ಭಾರತಿ ಅಧ್ಯಕ್ಷ ಸಂಪತ್ ಬಿ.ಸುವರ್ಣ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬೆಳಗ್ಗೆಯಿಂದ ವಿವಿಧ ವೈದಿಕ ಕಾರ್ಯಕ್ರಮ, ಸಂಜೆ 3ರಿಂದ ಮಡಂತ್ಯಾರು ಗೋಪಾಲಕೃಷ್ಣ ತಂತ್ರಿ ನೇತೃತ್ವದಲ್ಲಿ ಹನುಮ ಮಹಾಯಾಗ, ಸಂಜೆ 6ಕ್ಕೆ ಪೂರ್ಣಾಹುತಿಗೊಳ್ಳಲಿದೆ. 32 ಗ್ರಾಮಗಳ ಮನೆಗಳ ಭಕ್ತರಿಂದ ಎಳ್ಳುಗಂಟು ಸಮರ್ಪಣೆ ನೆರವೇರಲಿದ್ದು, ಹನುಮ ಶ್ರೀ ರಕ್ಷೆ ವಿತರಣೆ ಮಾಡಲಾಗುವುದು. ಈ ಸಂದರ್ಭದಲ್ಲಿ ಕುಣಿತ ಭಜನೋತ್ಸವ ಪ್ರಾರಂಭಗೊಂಡು ಸಂಜೆ 6ಕ್ಕೆ ಭಜನೆ ಮಂಗಳ ನಡೆಯಲಿದೆ. ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನ ಜಗದ್ಗುರು ಪೀಠದ ಪೀಠಾಧೀಶ ಮಹಾಮಂಡಲೇಶ್ವರ 1008 ಶ್ರೀ ಸದ್ಗುರು ಬ್ರಹ್ಮಾನಂದ ಸರಸ್ವತಿ ಮಹಾರಾಜರಿಗೆ ಗೌರವಾಭಿನಂದನೆ ನೆರವೇರಲಿದೆ ಎಂದರು.

ಅಳದಂಗಡಿ ಅರಮನೆ ತಿಮ್ಮಣ್ಣರಸ ಡಾ.ಪದ್ಮಪ್ರಸಾದ್ ಅಜಿಲ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಅಭಿನಂದನಾ ಭಾಷಣ ಮಾಡುವರು. ಸಂಸದ ಬ್ರಿಜೇಶ್ ಚೌಟ, ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಹರೀಶ್ ಪೂಂಜ, ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಮಾಜಿ ಶಾಸಕ ಕೆ.ಪ್ರಭಾಕರ ಬಂಗೇರ, ಬರೋಡಾ ತುಳುಕೂಟ ಅಧ್ಯಕ್ಷ ಶಶಿಧರ ಶೆಟ್ಟಿ ಬರೋಡಾ, ಅಳದಂಗಡಿ ಶ್ರೀ ಸತ್ಯದೇವತೆ ದೇವಸ್ಥಾನ ಆಡಳಿತ ಮೊಕ್ತೇಸರ ಶಿವಪ್ರಸಾದ್ ಅಜಿಲ, ಉಜಿರೆ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ಸಂಚಾಲಕ ಮೋಹನ್ ಕುಮಾರ್ ಭಾಗವಹಿಸಲಿದ್ದಾರೆ. ಬಳಿಕ ಲಂಕಾ ದಹನ ದೃಶ್ಯರೂಪಕ, ಸುಡುಮದ್ದು ಪ್ರದರ್ಶನ, ರಾತ್ರಿ ಛತ್ರಪತಿ ಶಿವಾಜಿ ನಾಟಕ ನಡೆಯಲಿದೆ ಎಂದರು.

ಸಮಿತಿ ಪ್ರಧಾನ ಸಂಚಾಲಕ ಪ್ರಭಾಕರ ಶೆಟ್ಟಿ ಉಪ್ಪಡ್ಕ, ಸಮಿತಿ ಗೌರವ ಸಲಹೆಗಾರ ಶಶಿಧರ ಶೆಟ್ಟಿ ಅಳದಂಗಡಿ, ಪ್ರಧಾನ ಸಂಚಾಲಕ ವಿಜಯ ಗೌಡ ವೇಣೂರು, ನಿತ್ಯಾನಂದ ನಾವರ, ಗೌರವ ಸಲಹೆಗಾರ ಉಮೇಶ್ ಶಿರ್ಲಾಲ್ ಉಪಸ್ಥಿತರಿದ್ದರು.

ಹನುಮೋತ್ಸವ ಕಾರ್ಯಕ್ರಮದ ಯಶಸ್ವಿಗೆ ಸಮಿತಿ ರಚನೆ ಮಾಡಿ 38 ಗ್ರಾಮದ ಮನೆ ಭೇಟಿ ಮಾಡಿ ಎಳ್ಳು ಗಂಟು ಸೇವೆಯಲ್ಲಿ ಭಾಗವಹಿಸುವಂತೆ 3 ದಿನಗಳ ವೃತದೊಂದಿಗೆ ತಾವೇ ಎಳ್ಳು ಗಂಟು ಸಮರ್ಪಣೆಗೆ ಅವಕಾಶ ನೀಡಲಾಗುವುದು. 20 ಲಕ್ಷ ರೂ. ವೆಚ್ಚದಲ್ಲಿ ಅದ್ದೂರಿ ಕಾರ್ಯಕ್ರಮವಾಗಲಿದೆ. ಪ್ರಭಾಕರ ಶೆಟ್ಟಿ ಉಪ್ಪಡ್ಕ, ಸಮಿತಿ ಪ್ರಧಾನ ಸಂಚಾಲಕ https://www.vijayavani.net/mp-visits-kavu-ca-bank https://www.vijayavani.net/rudra-yaga-chappara-muhurta