ಜಿಲ್ಲೆ

ವಲಸೆ ಹೋದವರು ವಾಪಸು

Koppal

ಹನುಮಸಾಗರ: ಹೊಟ್ಟೆ ಪಾಡಿಗಾಗಿ ವಿವಿಧೆಡೆ ಕೆಲಸ ಹುಡುಕಿ ವಲಸೆ ಹೋದವರು ವಾಪಸ್ ಆಗುತ್ತಿರುವುದರಿಂದ ಸ್ಥಳೀಯರಿಗೆ ಕರೊನಾ ಬೀತಿ ಎದುರಾಗಿದೆ. ಪಟ್ಟಣ ಹಾಗೂ ಹೋಬಳಿ ವ್ಯಾಪ್ತಿ ಹಳ್ಳಿಗಳ ಬಹಳಷ್ಟು ಜನ ಮಂಗಳೂರು, ಉಡುಪಿ, ಬೆಂಗಳೂರು, ಗೋವಾ, ಕೇರಳಾ, ಮಹಾರಾಷ್ಟ್ರಕ್ಕೆ ವಲಸೆ ಹೋಗಿದ್ದರು.

ಸೋಮವಾರ ಮತ್ತು ಮಂಗಳವಾರ ಹಿರೇಗೊಣ್ಣಾಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ 13 ಹಳ್ಳಿಗಳಲ್ಲಿ ಸುಮಾರು 200 ಜನ, ಹನುಮನಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ 14 ಹಳ್ಳಿಗಳಲ್ಲಿ ಸುಮಾರು 250, ಹೂಲಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ 11 ಹಳ್ಳಿಗಳಲ್ಲಿ ಸುಮಾರು 90, ಹನುಮಸಾಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ 13 ಹಳ್ಳಿಗಳಲ್ಲಿ ಸುಮಾರು 60, ಚಳಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ 24 ಹಳ್ಳಿಗಳಲ್ಲಿ ಸುಮಾರು 170, ಮಾಲಗಿತ್ತಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ 6 ಹಳ್ಳಿಗಳಲ್ಲಿ 80 ಕ್ಕೂ ಹೆಚ್ಚು ಜನ ಸ್ವಗ್ರಾಮಕ್ಕೆ ಮರಳಿದ್ದಾರೆ. ಸ್ವಗ್ರಾಮಕ್ಕೆ ವಾಪಸಾದ 80 ಜನರನ್ನು ಮಂಗಳವಾರ ಬೆಳಗ್ಗೆ ಗಜೇಂದ್ರಗಡದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪರೀಕ್ಷೆ ಮಾಡಿಸಲಾಗಿದೆ. 14 ದಿನ ಮನೆಯಿಂದ ಹೊರಬರದಂತೆ ಸೂಚಿಸಲಾಗಿದೆ.

ದುಡಿಯಸೆಂದು ಮಹಾನಗರಗಳಿಗೆ ಹೋಗಿದ್ದವರು ವಾಪಸಾಗಿರುವ ಕಾರಣ ಎಲ್ಲರೂ ತಪ್ಪದೇ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. 14 ದಿನ ಮನೆಯಲ್ಲೇ ಇರಬೇಕು. ಕರೊನಾ ವೈರಸ್ ಪೀಡಿತರು ಬಂದಿದ್ದಾರೆಂಬುದು ಸುಳ್ಳು ಸುದ್ದಿ. | ಡಾ.ವಿಜಯಲಕ್ಷ್ಮೀ ಮೆರವಾಡೆ ವೈದ್ಯಾಧಿಕಾರಿ, ಹಿರೇಗೊಣ್ಣಾಗರ