ಜಿಲ್ಲೆ

ಪೊಲೀಸ್ ಠಾಣೆ ಕಟ್ಟಡ ಪರೀಶಿಲಿಸಿದ ಎಸ್ಪಿ

ಹನುಮಸಾಗರ: ಪಟ್ಟಣದಲ್ಲಿ ನಿರ್ಮಾಣ ಹಂತದಲ್ಲಿರುವ ಪೊಲೀಸ್ ಠಾಣೆಯ ಕಟ್ಟಡ ಕಾಮಗಾರಿ ಹಾಗೂ ಪೊಲೀಸ್ ಸಿಬ್ಬಂದಿ ವಸತಿ ಗೃಹಗಳಿಗೆ ಎಸ್ಪಿ ಅರುಣಾಂಗ್ಷು ಗಿರಿ ಗುರುವಾರ ಸಂಜೆ ಭೇಟಿ ನೀಡಿ ಪರೀಶಿಲಿಸಿದರು.

ಪೊಲೀಸ್ ಸಿಬ್ಬಂದಿ ಕುಟುಂಬಸ್ಥರೊಂದಿಗೆ ಸೌಲಭ್ಯಗಳ ಬಗ್ಗೆ ಚರ್ಚಿಸಿ, ಠಾಣೆ ಹಾಗೂ ವಸತಿ ಗೃಹಗಳ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ತಿಳಿಸಿದರು. ಸಶಸ್ತ್ರ ಮೀಸಲು ಪಡೆಯ ಡಿವೈಎಸ್ಪಿ ಶಶಿಧರ ಹಿರೇಮಠ, ಸಿಪಿಐ ನಿಂಗಪ್ಪ ಎನ್.ಆರ್., ಪಿಎಸ್‌ಐ ಅಶೋಕ ಬೇವೂರ, ಕಚೇರಿಯ ಆಡಳಿತಾಧಿಕಾರಿ ಮಲ್ಲಿನಾಥ ಇತರರಿದ್ದರು.