ಜಿಲ್ಲೆ

ಚಿರತೆ ದಾಳಿಗೆ ನಾಯಿ ಬಲಿ ?: ಮಿಟ್ಟಲಕೊಡ ಗ್ರಾಮದಲ್ಲಿ ಘಟನೆ

Koppal

ಹನುಮಸಾಗರ: ಸಮೀಪದ ಮಿಟ್ಟಲಕೊಡ ಗ್ರಾಮದಲ್ಲಿ ಕಾಡುಪ್ರಾಣಿಯೊಂದು ನಾಯಿಯನ್ನು ತಿಂದು ಹಾಕಿದೆ. ಗ್ರಾಮದ ಮಲ್ಲಪ್ಪ ಜಕ್ಕಪ್ಪ ಯಲಿಗಾರ ಎಂಬುವರ ಜಮೀನಿನಲ್ಲಿರುವ ಮನೆಯ ಮುಂದೆ ಕಟ್ಟಿಹಾಕಿದ್ದ ನಾಯಿಯನ್ನು ಸೋಮವಾರ ರಾತ್ರಿ ಹೊತ್ತೊಯ್ದು, ಪಕ್ಕದ ಗುಡ್ಡದ ಮೇಲೆ ತಿಂದು ಹಾಕಿದೆೆ. ರಾತ್ರಿ 10.30ಕ್ಕೆ ನಾಯಿಯನ್ನು ಚಿರತೆ ಒಯ್ಯುತ್ತಿದ್ದನ್ನು ನೋಡಿರುವುದಾಗಿ ಮಲ್ಲಪ್ಪ ಅವರ ಸಹೋದರ ಪರಸಪ್ಪ ಯಲಿಗಾರ ಹೇಳಿದ್ದು, ಸುತ್ತಲಿನ ಜಮೀನಿನ ರೈತರಲ್ಲಿ ಆತಂಕ ಮೂಡಿಸಿದೆ. ಸ್ಥಳಕ್ಕೆ ಉಪವಲಯ ಅರಣ್ಯ ಅಧಿಕಾರಿ ಲಾಲಸಾಬ್ ಸೂಳಿಭಾವಿ, ಅರಣ್ಯ ರಕ್ಷಕರಾದ ಶಂಕ್ರಗೌಡ ಅಕ್ಕೆರಿ, ಕಳಕಪ್ಪ ಬ್ಯಾಳಿ, ಸಿಬ್ಬಂದಿ ವಿಠ್ಠಲ, ಮಲ್ಲಪ್ಪ ಭೇಟಿ ನೀಡಿ ಪರೀಶಿಲಿಸಿದ್ದಾರೆ.

ನಾಯಿ ಸತ್ತ ಸ್ಥಳಕ್ಕೆ ಸಿಬ್ಬಂದಿಯೊಂದಿಗೆ ಭೇಟಿ ನೀಡಿ, ಪರೀಶಿಲಿಸಲಾಗಿದೆ. ಚಿರತೆ ದಾಳಿ ಮಾಡಿದೆ ಎಂದು ಜನ ಹೇಳುತ್ತಿದ್ದು, ಮತ್ತೊಮ್ಮೆ ಪರೀಶಿಲನೆ ಮಾಡಿ ಎರಡ್ಮೂರು ದಿನಗಳಲ್ಲಿ ಬೋನು ಅಳವಡಿಸಲಾಗುವುದು.| ಲಾಲಸಾಬ್ ಸೂಳಿಭಾವಿ, ಉಪವಲಯ ಅರಣ್ಯ ಅಧಿಕಾರಿ, ಹನುಮನಾಳ