ಹನುಮಸಾಗರ ಸಮೀಪದ ಬಿಳೆಕಲ್‌ನಲ್ಲಿ ಹಮ್ಮಿಕೊಂಡ ಕಾನೂನು ಅರಿವು ಕಾರ್ಯಕ್ರಮವನ್ನು ಗ್ರಾಪಂ ಅಧ್ಯಕ್ಷೆ ಕನಕವ್ವ ಕೃಷ್ಣಪ್ಪ ದಾಸರ ಉದ್ಘಾಟಿಸಿದರು. 
ಜಿಲ್ಲೆ

ಪ್ರತಿಯೊಬ್ಬರೂ ಕಾನೂನು ತಿಳಿದುಕೊಳ್ಳಿ

ಹನುಮಸಾಗರ: ಪ್ರತಿಯೊಬ್ಬರೂ ಕಾನೂನು ತಿಳಿದುಕೊಳ್ಳುವುದು ಅವಶ್ಯವಿದೆ ಎಂದು ನ್ಯಾಯವಾದಿ ಚಂದ್ರಶೇಖರ ಉಪ್ಪಿನ ಹೇಳಿದರು. ಸಮೀಪದ ಬಿಳೆಕಲ್ ಗ್ರಾಮದಲ್ಲಿ ಗ್ರಾಪಂ ಹಾಗೂ ನ್ಯಾಯವಾದಿಗಳ ಸಂಘ ಹಮ್ಮಿಕೊಂಡ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾನೂನು ಶ್ರೇಷ್ಠವಾದದ್ದು, ಅದನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ. ಎಲ್ಲರೂ ಕಾನೂನಿನ ಅಡಿಯಲ್ಲಿ ಕೆಲಸ ಮಾಡಬೇಕು, ಇದನ್ನು ಮೀರಿ ನಡೆದುಕೊಂಡರೆ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ನಮ್ಮೆಲ್ಲರ ಏಳಿಗೆಗಾಗಿ ಕಾನೂನು ಇದೆ. ಸಾರ್ವಜನಿಕರು ಅದನ್ನು ಸರಿಯಾಗಿ ತಿಳಿದುಕೊಂಡು ಅದರ ಅಡಿ ಕರ್ತವ್ಯ ನಿರ್ವಹಿಸಬೇಕು ಎಂದರು. ವಿಎಸ್‌ಎಸ್‌ನ ನಿರ್ದೇಶಕ ಮಲ್ಲಪ್ಪ ಮೇಲಿನ್ಮನಿ, ಗ್ರಾಪಂ ಸಿಬ್ಬಂದಿ ಮಲ್ಲಪ್ಪ ಹಡಪದ, ಧರಿಯಪ್ಪ ಮುರಡಿ ಇತರರಿದ್ದರು.