ಹನುಮಸಾಗರ ಸಮೀಪದ ಕೊರಡಕೇರಾದಲ್ಲಿ ಕೋವಿಡ್‌ನಿಂದ ಮೃಪಟ್ಟವರ ಕುಟುಂಬದವರಿಗೆ ಸಹಾಯಕ ಆಯುಕ್ತ ನಾರಾಯಣರಡ್ಡಿ ಕನಕರಡ್ಡಿ ಸರ್ಕಾರದ ವಿವಿಧ ಪರಿಹಾರಗಳ ಆದೇಶ ಪ್ರತಿಗಳನ್ನು ಬುಧವಾರ ವಿತರಿಸಿದರು. 
ಜಿಲ್ಲೆ

ಬಾಧಿತರ ಮನೆಗೆ ಆದೇಶ ಪ್ರತಿ- ಸಹಾಯಕ ಆಯುಕ್ತ ನಾರಯಣರಡ್ಡಿ ಕನಕರಡ್ಡಿ ಹೇಳಿಕೆ

Koppal

ಹನುಮಸಾಗರ: ಕೋವಿಡ್‌ನಿಂದ ಮೃತಪಟ್ಟವರ ಕುಟುಂಬದವರಿಗೆ ಸರ್ಕಾರದ ವಿವಿಧ ಯೋಜನೆಗಳ ಆದೇಶ ಪ್ರತಿಗಳನ್ನು ಮನೆಗೆ ಭೇಟಿ ನೀಡಿ ನೀಡಲಾಗುತ್ತಿದೆ ಎಂದು ಸಹಾಯಕ ಆಯುಕ್ತ ನಾರಾಯಣರಡ್ಡಿ ಕನಕರಡ್ಡಿ ಹೇಳಿದರು.

ಸಮೀಪದ ಕೊರಡಕೇರಾ ಗ್ರಾಮದಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಕುಟುಂಬದವರಿಗೆ ಬುಧವಾರ ವಿವಿಧ ಪರಿಹಾರಗಳ ಆದೇಶ ಪ್ರತಿ ವಿತರಿಸಿ ಮಾತನಾಡಿದರು. ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಅಂತ್ಯ ಸಂಸ್ಕಾರ ಪರಿಹಾರ, ರಾಷ್ಟ್ರೀಯ ಭದ್ರತಾ ಪರಿಹಾರ ಹಾಗೂ ವಿಧವಾ ವೇತನದ ಆದೇಶ ಪ್ರತಿ ನೀಡಲಾಗುತ್ತಿದೆ. ಕುಟುಂಬದಲ್ಲಿ ದುಡಿಯುವ ವ್ಯಕ್ತಿಯನ್ನು ಕಳೆದುಕೊಂಡ ಕುಟುಂಬಕ್ಕೆ ಆಸರೆಯಾಗುವುದು ಇದರ ಮುಖ್ಯ ಉದ್ದೇಶವಾಗಿದೆ. ಈ ಕಾರ್ಯ ಪ್ರತಿ ಬುಧವಾರ ನಡೆಯಲಿದೆ ಎಂದರು.

ಉಪತಹಸೀಲ್ದಾರ್ ರೇಣುಕಾ ಹಾದಿಮನಿ, ಕಂದಾಯ ನಿರೀಕ್ಷಕ ಉಮೇಶಗೌಡ ಮಾಲಿ ಪಾಟೀಲ್, ಗ್ರಾಮಲೆಕ್ಕಾಧಿಕಾರಿ ಗಂಗಾಧರ ಅರಳಿಕಟ್ಟಿ, ಗ್ರಾಮ ಸಹಾಯಕ ಶರಣಪ್ಪ ಇತರರಿದ್ದರು.