ಹನುಮಸಾಗರ ಸಮೀಪದ ಯರಗೇರಾದಲ್ಲಿ ದೇವಮ್ಮ ದೇವಿ ಪಲ್ಲಕ್ಕಿ ಉತ್ಸವ ಶುಕ್ರವಾರ ವಿಜೃಂಭಣೆಯಿಂದ ಜರುಗಿತು. ಗ್ರಾಪಂ ಅಧ್ಯಕ್ಷ ಬಸವರಾಜ ಶೆಟ್ಟರ್, ಪ್ರವಚನಕಾರ ದೇವೇಂದ್ರಪ್ಪ ಪತ್ತಾರ, ಗಾಯಕ ಈರಪ್ಪ ಈಳಗೇರ, ಮುಖಂಡರಾದ ಶರಣಯ್ಯ ಹಿರೇಮಠ, ರಾಜಪ್ಪ ತಳವಾರ, ಧರ್ಮಣ್ಣ ಗಡಾದ ಇತರರಿದ್ದರು.  
ಜಿಲ್ಲೆ

ಯರಗೇರಾ ದೇವಮ್ಮ ದೇವಿ ಜಾತ್ರೆ ಅದ್ದೂರಿ

ಕುರುವತ್ತಿ ಶ್ರೀಕಾಂತಪ್ಪ

ಹನುಮಸಾಗರ: ಸಮೀಪದ ಯರಗೇರಾ ಗ್ರಾಮದಲ್ಲಿ ದೇವಮ್ಮ ದೇವಿ ಜಾತ್ರಾ ಮಹೋತ್ಸವ ಶುಕ್ರವಾರ ವಿಜೃಂಭಣೆಯಿಂದ ಜರುಗಿತು.

ಜಾತ್ರೆ ನಿಮಿತ್ತ ದೇವಸ್ಥಾನದಲ್ಲಿ ಬೆಳಗ್ಗೆ ದೇವಿಗೆ ಉಡಿ ತುಂಬುವ ಕಾರ್ಯ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಒಂದು ತಿಂಗಳಕಾಲ ನಡೆದ ಪುರಾಣ ಪ್ರವಚನ ಮಂಗಳಗೊಂಡಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿಜೃಂಭಣೆಯಿಂದ ಜರುಗಿದ ಪಲ್ಲಕ್ಕಿ ಉತ್ಸವದಲ್ಲಿ ವಿವಿಧ ಕಲಾ ತಂಡಗಳು, ಪುರವಂತರು ಭಾಗವಹಿಸಿದ್ದರು.

ಗ್ರಾಪಂ ಅಧ್ಯಕ್ಷ ಬಸವರಾಜ ಶೆಟ್ಟರ್, ಪ್ರವಚನಕಾರ ದೇವೇಂದ್ರಪ್ಪ ಪತ್ತಾರ, ಗಾಯಕ ಈರಪ್ಪ ಈಳಗೇರ, ಮುಖಂಡರಾದ ಶರಣಯ್ಯ ಹಿರೇಮಠ, ರಾಜಪ್ಪ ತಳವಾರ, ಧರ್ಮಣ್ಣ ಗಡಾದ, ಶರಣಪ್ಪ ಬಂಡಿ, ಈರಪ್ಪ ಕಲ್ಯಾಣಿ, ರಾಮಣ್ಣ ಈಳಗೇರ, ಈರಪ್ಪ ಮಾಳಶಟ್ಟಿ, ಮುತ್ತು ಸೂಡಿ, ಶರಣಪ್ಪ ವಾಲಿಕಾರ, ಯರಗೇರಾ ಹಾಗೂ ಮದನಾಳ ಗ್ರಾಮಸ್ಥರಿದ್ದರು.