ಹನುಮಸಾಗರ ಗ್ರಾಪಂಗೆ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ,ಉಪಾಧ್ಯಕ್ಷರಾಗಿ ಹನಮವ್ವ ಕಂದಗಲ್ ಗುರುವಾರ ಆಯ್ಕೆಯಾದರು. 
ಜಿಲ್ಲೆ

ಹನುಮಸಾಗರ ಗ್ರಾಮ ಪಂಚಾಯಿತಿ ಬಿಜೆಪಿ ತೆಕ್ಕೆಗೆ

ಹನುಮಸಾಗರ: ಇಲ್ಲಿನ ಗ್ರಾಪಂಗೆ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ, ಉಪಾಧ್ಯಕ್ಷೆಯಾಗಿ ಹನಮವ್ವ ಕಂದಗಲ್ ಆಯ್ಕೆಯಾದರು.


ಪಟ್ಟಣದ ಗ್ರಾಪಂಯಲ್ಲಿ 38 ಜನ ಸದಸ್ಯರಿದ್ದು, ಕರಿಸಿದ್ದಪ್ಪ ಬಾಚಲಾಪುರ ಹಾಗೂ ರುದ್ರಗೌಡ ಗೌಡಪ್ಪನವರ ನಾಮಪತ್ರ ಸಲ್ಲಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ಕರಿಸಿದ್ದಪ್ಪ ಬಾಚಲಾಪುರ 18, ಬಿಜೆಪಿ ಅಭ್ಯರ್ಥಿ ರುದ್ರಗೌಡ ಗೌಡಪ್ಪನವರ 20 ಮತ ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡ ಮಹಿಳೆಗೆ ಮೀಸಲಾಗಿದ್ದು, ಈ ವರ್ಗದಲ್ಲಿ ಒಬ್ಬರೇ ಸದಸ್ಯೆ ಇರುವುದರಿಂದ ಹನಮವ್ವ ಕಂದಗಲ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.


ಬಿಜೆಪಿ ತಾಲೂಕು ಅಧ್ಯಕ್ಷ ಬಸವರಾಜ ಹಳ್ಳೂರು, ಎಪಿಎಂಸಿ ಮಾಜಿ ಅಧ್ಯಕ್ಷ ಶರಣಪ್ಪ ಹುಲ್ಲೂರು, ಪ್ರಮುಖರಾದ ಶಿವಪುತ್ರಪ್ಪ ಕೊಳ್ಳುರು, ತಿಮ್ಮನಗೌಡ ಪೊಲೀಸ್ ಪಾಟೀಲ್, ಭರಮಪ್ಪ ಬಿಂಗಿ, ನಾಗರಾಜ ಅಕ್ಕಿ ಇತರರಿದ್ದರು.