ಹನುಮಸಾಗರದ ಗ್ರಾಮದೇವತೆ ಸಮುದಾಯ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪೋಷಣ ಅಭಿಯಾನದ ಸಮಾರೋಪವನ್ನು ಗಣ್ಯರು ಉದ್ಘಾಟಿಸಿದರು. ಜಿಲ್ಲಾ ನಿರೂಪಣಾಧಿಕಾರಿ ನಟರಾಜ, ಸಿಡಿಪಿಒ ಯಲ್ಲಮ್ಮ ಹಂಡಿ, ಗ್ರಾಪಂ ಸದಸ್ಯರಾದ ಬಸವರಾಜ ದ್ಯಾವಣ್ಣನವರ, ಬಸವರಾಜ ಹಕ್ಕಿ, ಹನುಮಂತಪ್ಪ ಅಕ್ಕಿ, ಪೋಷಣ ಅಭಿಯಾನದ ತಾಲೂಕು ಸಂಯೋಜಕಿ ಭಾಗ್ಯಶ್ರೀ, ಮೇಲ್ವಿಚಾರಕರಾದ ಮಂಜುಳಾ ಹಕ್ಕಿ, ಕಲಾವತಿ ಭಕ್ತನಕೊಪ್ಪ, ಭುವನೇಶ್ವರಿ, ದುರಗಮ್ಮ, ಶಿವಲೀಲಾ, ಪುಷ್ಪಾ, ಶೋಭಾ, ರೇಣುಕಾ, ಸಾವಿತ್ರಿ, ಅನ್ನಪೂರ್ಣ ಇತರರಿದ್ದರು.  
ಜಿಲ್ಲೆ

ಗರ್ಭಿಣಿಯರು ಪೌಷ್ಟಿಕ ಆಹಾರ ಸೇವಿಸಲಿ

ಪ್ರವೀಣ ಉದುಸಾ ದಲಬಂಜನ್

ಹನುಮಸಾಗರ: ಗರ್ಭಿಣಿಯರು ಹಾಗೂ ತಾಯಂದಿರು ಸಮತೋಲನ ಆಹಾರ ಸೇವನೆ ಮಾಡುವುದು ಅಗತ್ಯ ಎಂದು ಎಂದು ಜಿಲ್ಲಾ ನಿರೂಪಣಾಧಿಕಾರಿ ನಟರಾಜ ಹೇಳಿದರು.

ಪಟ್ಟಣದ ಗ್ರಾಮದೇವತೆ ಸಮುದಾಯ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಪೋಷಣ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಕಳೆದ ಒಂದು ತಿಂಗಳಿಂದ ಅಭಿಯಾನದಡಿ ಕಾರ್ಯಕ್ರಮಗಳನ್ನು ಪ್ರತಿಯೊಂದು ಅಂಗನವಾಡಿ ಕೇಂದ್ರಗಳಲ್ಲಿ ನಡೆಸಲಾಗುತ್ತಿದೆ. ಬಾಣಂತಿಯರು, ಗರ್ಭಿಣಿಯರು ಪೌಷ್ಟಿಕ ಆಹಾರ ಸೇವನೆ ಮಾಡಬೇಕು. ಪ್ರತಿಯೊಬ್ಬರು ಆರೋಗ್ಯವಾಗಿ ಜೀವಿಸಲು ವೈಯಕ್ತಿಕ ಸ್ವಚ್ಛತೆಗೆ ಆದ್ಯತೆ ನೀಡಬೇಕು. ನಿತ್ಯ ವ್ಯಾಯಾಮ, ಯೋಗಾಸನ ಮಾಡಬೇಕು. ತರಕಾರಿ, ಮೊಟ್ಟೆ, ಮೀನು, ಏಕದಳ ಹಾಗೂ ದ್ವಿದಳ ಧಾನ್ಯಗಳನ್ನು ಸೇವಿಸಬೇಕು, ಮಕ್ಕಳಲ್ಲಿ ಅಪೌಷ್ಟಿಕತೆ ಉಂಟಾಗದಂತೆ ತಾಯಂದಿರು ನೋಡಿಕೊಳ್ಳಬೇಕು. ಕಾರ್ಯಕ್ರಮದಲ್ಲಿ ಗರ್ಭಿಣಿಯರಿಗೆ ಸೀಮಂತ ಮಾಡಲಾಯಿತು.

ಸಿಡಿಪಿಒ ಯಲ್ಲಮ್ಮ ಹಂಡಿ, ಗ್ರಾಪಂ ಸದಸ್ಯರಾದ ಬಸವರಾಜ ದ್ಯಾವಣ್ಣನವರ, ಬಸವರಾಜ ಹಕ್ಕಿ, ಹನುಮಂತಪ್ಪ ಅಕ್ಕಿ, ಪೋಷಣ ಅಭಿಯಾನದ ತಾಲೂಕು ಸಂಯೋಜಕಿ ಭಾಗ್ಯಶ್ರೀ, ಮೇಲ್ವಿಚಾರಕಿಯರಾದ ಮಂಜುಳಾ ಹಕ್ಕಿ, ಕಲಾವತಿ ಭಕ್ತನಕೊಪ್ಪ, ಭುವನೇಶ್ವರಿ, ದುರಗಮ್ಮ, ಶಿವಲೀಲಾ, ಪುಷ್ಪಾ, ಶೋಭಾ, ರೇಣುಕಾ, ಸಾವಿತ್ರಿ, ಅನ್ನಪೂರ್ಣ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.