ಹನುಮಸಾಗರದ ಬನಶಂಕರಿ ದೇವಸ್ಥಾನದಿಂದ ಭಾನುವಾರ ವಿಶ್ವಾಮಿತ್ರ ಲೈಟ್ ಫೌಂಡೇಷನ್ ಹಾಗೂ ಧ್ಯಾನ ಮಹಾಯಜ್ಞ ವತಿಯಿಂದ ಸಸ್ಯಾಹಾರಿ ಜನಜಾಗೃತಿ ಜಾಥಾ ನಡೆಯಿತು. ಎಎಸ್‌ಐ ಶಿವಕುಮಾರ ಹಿರೇಮಠ, ದೇವಾಂಗ ಸಮುದಾಯದ ಸ್ಥಳೀಯ ಅಧ್ಯಕ್ಷ ಶಂಕ್ರಪ್ಪ ಸಿನ್ನೂರ, ಮುಖಂಡರಾದ ಗುರುರಾಜ ದೇಸಾಯಿ, ಶ್ರೀದೇವಿ ಹಿರೇಮಠ, ಏಕನಾಥ ಮೆದಿಕೇರಿ, ಶಂಕರ ಹುಲಮನಿ, ವಸಂತ ಸಿನ್ನೂರ, ಮಹೇಶ ಹುಲಮನಿ, ಕೂಡ್ಲೆಪ್ಪ ಸಿನ್ನೂರ, ಜಗದೀಶ ಕುಲಕರ್ಣಿ, ಹನುಮೇಶ ಕಾಟ್ವಾ, ಮೋತಿಲಾಲಸಾ ಕಾಟವಾ, ಅಶೋಕ ಸಿನ್ನೂರ, ಅನೀಲ ಸಿನ್ನೂರ ಇತರರಿದ್ದರು. 
ಜಿಲ್ಲೆ

ಸಸ್ಯಾಹಾರದಿಂದ ಉತ್ತಮ ಆರೋಗ್ಯ

ಹನುಮಸಾಗರ: ಸಸ್ಯಾಹಾರವು ಮಾನವ ಜೀರ್ಣಕ್ರೀಯೆಗೆ ಶುದ್ಧ ಆಹಾರವಾಗಿದೆ ಎಂದು ಎಎಸ್‌ಐ ಶಿವಕುಮಾರ ಹಿರೇಮಠ ಹೇಳಿದರು.

ಇಲ್ಲಿನ ಬನಶಂಕರಿ ದೇವಸ್ಥಾನದಲ್ಲಿ ಭಾನುವಾರ ವಿಶ್ವಾಮಿತ್ರ ಲೈಟ್ ಫೌಂಡೇಷನ್ ಹಾಗೂ ಧ್ಯಾನ ಮಹಾಯಜ್ಞವತಿಯಿಂದ ಹಮ್ಮಿಕೊಂಡಿದ್ದ ಸಸ್ಯಾಹಾರಿ ಜನಜಾಗೃತಿ ಜಾಥಾದಲ್ಲಿ ಮಾತನಾಡಿದರು. ಮಾಂಸ ಆಹಾರವು ರಾಕ್ಷಸರ ಆಹಾರವಾಗಿದೆ. ಸಸ್ಯಾಹಾರದಿಂದ ಮನುಷ್ಯನ ಎಲ್ಲ ಗುಣಗಳು ಸಾತ್ವಿಕವಾಗುತ್ತವೆ. ಈ ಆಹಾರ ಸೇವನೆಯಿಂದ ಆರೋಗ್ಯವಾಗಿರಲು ಸಾಧ್ಯವಾಗುತ್ತದೆ. ಮಾಂಸ ಸೇವನೆಯಿಂದ ಕಾಯಿಲೆ ಬರುತ್ತವೆ. ಅದರಲ್ಲಿನ ಕೊಬ್ಬಿನಾಂಶ ದೇಹವನ್ನು ದುರ್ಬಲಗೊಳಿಸುತ್ತದೆ. ಅದಕ್ಕಾಗಿ ಪ್ರತಿಯೊಬ್ಬರು ಸಸ್ಯಾಹಾರ ಸೇವಿಸಬೇಕು ಎಂದರು.

ಪಟ್ಟಣದ ಕಿತ್ತೂರ ರಾಣಿ ಚನ್ನಮ್ಮ ವೃತ್ತ, ಸ್ವಾಮಿವಿವೇಕಾನಂದ ವೃತ್ತ, ಹೊಸ ಬಸ್ ನಿಲ್ದಾಣ, ಅಂಬಾಭವಾನಿ ದೇವಸ್ಥಾನದ ಮಾರ್ಗವಾಗಿ ಜಾಥಾ ಬನಶಂಕರಿ ದೇವಸ್ಥಾನ ತಲುಪಿತು.