ಜಿಲ್ಲೆ

ಹಳ್ಳಿಗಳಿಗೆ ಬೇಕು ಮೂಲಸೌಕರ್ಯ

ಉಪತಹಸೀಲ್ದಾರ್ ರೇಣುಕಾ ಹಾದಿಮನಿಗೆ ನವ ಕರ್ನಾಟಕ ಸೈನ್ಯ ಮನವಿ

ಹನುಮಸಾಗರ: ವಿವಿಧ ಹಳ್ಳಿಗಳಿಗೆ ಅಗತ್ಯ ಮೂಲ ಸೌಕರ್ಯ ಒದಗಿಸುವಂತೆ ಒತ್ತಾಯಿಸಿ ನವ ಕರ್ನಾಟಕ ಸೈನ್ಯ ಗುರುವಾರ ಉಪತಹಸೀಲ್ದಾರ್ ರೇಣುಕಾ ಹಾದಿಮನಿಗೆ ಮನವಿ ಸಲ್ಲಿಸಿತು.

ಸಂಘಟನೆ ಜಿಲ್ಲಾಧ್ಯಕ್ಷ ಸಂಗಮೇಶ ಗುರಿಕಾರ ಮಾತನಾಡಿ, ಹನುಮಸಾಗರ, ಹನುಮನಾಳ ಹೋಬಳಿಯ ಬಹಳಷ್ಟು ಗ್ರಾಮಗಳಲ್ಲಿ ಕುಡಿಯುವ ನೀರು, ಸಮರ್ಪಕ ರಸ್ತೆ, ಸಾರ್ವಜನಿಕ ಶೌಚಗೃಹಗಳ ಸಮಸ್ಯೆ ಇವೆ. ಇವರನ್ನು ಬಗೆಹರಿಸಬೇಕು. ಎರಡೂ ಹೋಬಳಿಗಳಲ್ಲಿ ಪದವಿ ಕಾಲೇಜು ಪ್ರಾರಂಭಿಸಬೇಕು. ಹನುಮನಾಳದಲ್ಲಿ ಮುರಾರ್ಜಿ ವಸತಿ ಶಾಲೆ ಸ್ಥಾಪಿಸಬೇಕು. ಕುಷ್ಟಗಿ ತಾಲೂಕನ್ನು ಬರಪಡೀತ ಎಂದು ಘೋಷಿಸಬೇಕು. ಬೆಳೆ ವಿಮೆ ಜಮಾ ಆಗದ ರೈತರಿಗೆ ಕೂಡಲೇ ಜಮಾ ಮಾಡಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮ ಸಾರಾಯಿ ಮಾರಾಟ ನಿಲ್ಲಿಸಿ, ಸಾರಾಯಿ ಮುಕ್ತ ಗ್ರಾಮ ಎಂದು ಘೋಷಿಸಬೇಕು ಎಂದು ಒತ್ತಾಯಿಸಿದರು.

ಉಪತಹಸೀಲ್ದಾರ್ ರೇಣುಕಾ ಹಾದಿಮನಿ ಮನವಿ ಪತ್ರ ಸ್ವೀಕರಿಸಿದರು. ಕರ್ನಾಟಕ ಸೈನ್ಯದ ರಾಜ್ಯಾಧ್ಯಕ್ಷ ಮಹೇಶ ಕವಡ್ಕಿ, ಜಿಲ್ಲಾ ಉಪಾಧ್ಯಕ್ಷ ಖಾಜಾವಲಿ, ಪದಾಧಿಕಾರಿಗಳಾದ ಬಿ.ಎಂ.ಸಜ್ಜನ, ರವಿ ಬೇನಾಳ, ಚಂದ್ರಶೇಖರ ಗೊಂಡಿ, ಶರಣಪ್ಪ ಮಾಲಗಿತ್ತಿ, ಮಂಜುನಾಥ ಕೊಳ್ಳಿ, ಗಿರಿಜಾ ಬೋವಿ, ಹನುಮಂತ ವಡ್ಡರ, ಹನುಮಂತ ಮಾವಿನಇಟಗಿ, ಮಹಾಂತೇಶ ಬಾಗಲಿ, ಸುರಶ ಶಾಂತಗೇರಿ, ಸುರೇಶ ಹೊಸಮನಿ ಇದ್ದರು.