ಹನುಮಸಾಗರ: ವಿದ್ಯಾರ್ಥಿಗಳು ಕಾನೂನಿನ ಸಾಮಾನ್ಯ ಜ್ಞಾನ ಪಡೆಯಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ದೇವೇಂದ್ರ ಪಂಡಿತ್ ಹೇಳಿದರು.
ಇಲ್ಲಿನ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಿ, ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ವಕೀಲರ ಸಂಘ ಹಮ್ಮಿಕೊಂಡಿದ್ದ ಕಾನೂನು ವಿದ್ಯಾ ಪ್ರಸಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಕ್ಕಳ ಸಂರಕ್ಷಣೆಯಲ್ಲಿ ಮಕ್ಕಳ ಸಂರಕ್ಷಣಾ ಕಾಯ್ದೆ, ಬಾಲ್ಯವಿವಾಹನ ನಿಷೇಧ, ಪೋಕ್ಸೋ ಸೇರಿ ವಿವಿಧ ಕಾನೂನು ಸಂವಿಧಾನದಲ್ಲಿ ಅನುಷ್ಠಾನಗೊಳಿಸಲಾಗಿದೆ. ವಿದ್ಯೆಯೊಂದಿಗೆ ಕಾನೂನಿನ ಮಾಹಿತಿ ಪಡೆದುಕೊಳ್ಳಬೇಕು. ಸಮಾಜದ ಪ್ರತಿಯೊಬ್ಬರಿಗೂ ನ್ಯಾಯ ಸಿಗುವಂತಹ ವಾತಾವರಣ ನಿರ್ಮಾಣ ಮಾಡುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ ಎಂದರು.
ವಕೀಲರ ಸಂಘದ ಅಧ್ಯಕ್ಷ ಎಂ.ಎಚ್.ಗೋಡಿ, ಉಪಪ್ರಾಚಾರ್ಯ ಎಂ.ಎಸ್.ಬಡದಾನಿ, ಮುಖ್ಯಶಿಕ್ಷಕರಾದ ರಾಯಮ್ಮ ಉಕ್ಕಲಿ, ಎಚ್.ಎಚ್.ಇಳಕಲ್, ನಂದಲಾಲ್ ದಲಬಂಜನ, ಪಿಎಸ್‌ಐ ಅಶೋಕ ಬೇವೂರು, ವಕೀಲರಾದ ವಿಜಯಮಹಾಂತೇಶ ಕುಷ್ಟಗಿ, ಸುನೀಲ್, ಶಿಕ್ಷಣ ಸಂಯೋಜಕ ದಾವಲಸಾಬ್ ವಾಲಿಕಾರ, ಶಿಕ್ಷಕರಾದ ಅಮರೇಶ ತಮ್ಮಣ್ಣನವರ, ಭಾರತಿ ಕುರನಾಳ, ಯಲ್ಲಮ್ಮ, ಶಂಕರಪ್ಪ ತಳವಾರ, ಷಣ್ಮುಖಪ್ಪ ಕರಡಿ, ಶಿವಾನಂದ ಹಂಪಿಹೊಳೆ, ಬಿರಪ್ಪ ಕಡ್ಲಿಮಟ್ಟಿ, ಶಿವಪ್ಪ ಕಮ್ಮಾರ ಇತರರಿದ್ದರು.