ಹನುಮಸಾಗರ: ಪಟ್ಟಣದ ನವೀಕರಣ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನ ಮತ್ತು ನೂತನ ಮಹಾದ್ವಾರವನ್ನು ಕುದರಿಮೋತಿ ವಿಜಯಮಹಾಂತ ಸ್ವಾಮೀಜಿ ಬುಧವಾರ ಉದ್ಘಾಟನೆಗೊಳಿಸಿದರು.
ಭಕ್ತರ ಸೇವೆಯಿಂದ ದೇವಸ್ಥಾನ ಉತ್ತಮ ರೀತಿಯಲ್ಲಿ ನವೀಕರಣಗೊಂಡಿದೆ. ಈ ದೇವಸ್ಥಾನದಲ್ಲಿ ಇನ್ನೂ ಮುಂದೆ ನಿರಂತರ ರುದ್ರಾಭಿಷೇಕ, ಪೂಜೆಗಳು ನಿರಂತರವಾಗಿ ನಡೆಯುತ್ತಿರಲಿ ಎಂದು ವಿಜಯಮಹಾಂತ ಸ್ವಾಮೀಜಿ ಹೇಳಿದರು.
ಬೆಳಗ್ಗೆ ದೇವಸ್ಥಾನದಲ್ಲಿ ರುದ್ರಾಭಿಷೇಕ, ಹೋಮ, ಹವನ, ಮಹಾಮಂಗಳಾರತಿ, ಪಂಚಾಮೃತ, ನೈವೇದ್ಯ, ಬಿಲ್ವಾರ್ಚನೆ ಹಾಗೂ ಭಕ್ತರಿಂದ ಶಿವನಾಮ ಜಪ ನೆರವೇರಿತು.
ಹಾಳಕೇರಿ ಅನ್ನದಾನೇಶ್ವರ ಮಠದ ಮುಪ್ಪಿನ ಬಸವಲಿಂಗ ಸ್ವಾಮೀಜಿ, ಮಾಜಿ ಸಚಿವ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಪಾಟೀಲ ಬಯ್ಯಪೂರ, ಜಿಪಂ ಮಾಜಿ ಸದಸ್ಯ ಕೆ.ಮಹೇಶ, ದೊಡ್ಡಬಸನಗೌಡ ಪಾಟೀಲ್ ಬಯ್ಯಪುರ, ಗ್ರಾಪಂ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ, ಮುಖಂಡರಾದ ಕರಿಸಿದ್ಧಪ್ಪ ಕುಷ್ಟಗಿ, ರಾಚಪ್ಪ ಚಿನಿವಾಲರ, ಮಹಾಂತೇಶ ಅಗಸಿಮುಂದಿನ, ವಿಶ್ವನಾಥ ನಾಗೂರ, ನಿಂಗಪ್ಪ ಮೋಟಗಿ, ಮಲ್ಲಯ್ಯ ಕೋಮಾರಿ, ವಾಸುದೇವ ನಾಗೂರ, ಮಹಾಂತಯ್ಯ ಕೋಮಾರಿ, ಹನುಮೇಶ ನಾಗೂರ, ಶಿವಪುತ್ರಪ್ಪ ಕಂಪ್ಲಿ, ಶೇಖಪ್ಪ ಸಜ್ಜನ, ಬಸವರಾಜ ದ್ಯಾವಣ್ಣನವರ, ಶೇಖಪ್ಪ ದೋಟಿಹಾಳ, ಸಿದ್ಧಯ್ಯ ಬಾಳಿಹಳ್ಳಮಠ, ಮರೇಗೌಡ ಬೋದುರ, ಬಸವರಾಜ ಚಿನಿವಾಲರ, ಕಲ್ಲಪ್ಪ ಕೋಳುರ, ಶ್ರೀಶೈಲ ಪಾದಯಾತ್ರೆಯ ಭಕ್ತರು, ಶ್ರೀಶೈಲ ಮಲ್ಲಿಕಾರ್ಜುನ ಸೇವಾ ಸಮಿತಿಯ ಪದಾಧಿಕಾರಿಗಳು, ಬಾಗಲಕೋಟಿ ಪಟ್ಟಣಶೆಟ್ಟಿ, ಗುಳೇದಗುಡ್ಡ ಪಟ್ಟಣಶೆಟ್ಟಿ ಕುಟುಂಬಸ್ಥರು, ಸೊಲ್ಲಾಪುರ, ವಿಜಯಪುರ, ಗದಗ, ಹುಬ್ಬಳ್ಳಿ, ಬಾಗಲಕೋಟೆ ಸೇರಿ ವಿವಿಧ ಭಾಗಗಳ ಭಕ್ತರು ಇದ್ದರು.