ಹನುಮಸಾಗರ: ಶ್ರೀ ಬೀರಲಿಂಗೇಶ್ವರ ಜಾತ್ರೆ ನಿಮಿತ್ತ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಗುರುವಾರ ಶ್ರೀಸ್ವಾಮಿಯ ಅಡ್ಡಪಲ್ಲಕಿ ಉತ್ಸವ ವಿಜೃಂಭಣೆಯಿಂದ ಜರುಗಿತು.
ಈ ನಿಮಿತ್ತ ಬೆಳಗ್ಗೆ ದೇವಸ್ಥಾನದಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳು ಜರುಗಿದವು. ನಂತರ ಡೊಳ್ಳು ಕುಣಿತ, ಕಳಸ ಮತ್ತು ಸಕಲ ವಾದ್ಯ ವೈಭವಗಳೊಂದಿಗೆ ಸಂತೆ ಬಜಾರ್, ಹಳೇ ಬಸ್ ನಿಲ್ದಾಣ, ಬನಶಂಕರಿ ದೇವಸ್ಥಾನ, ಗಾಂಧಿ ಸರ್ಕಲ್, ಗೂಳಿ ಬಸವೇಶ್ವರ ಸರ್ಕಲ್ ಸೇರಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ಸಾಗಿತು.
ಉತ್ಸವದಲ್ಲಿ ಹಾಲುಮತ ಸದುದಾಯದ ಸ್ಥಳೀಯ ಗೌರವಾಧ್ಯಕ್ಷ ಸಕ್ರಪ್ಪ ಬಿಂಗಿ, ಅಧ್ಯಕ್ಷ ಭರಮಪ್ಪ ಬಿಂಗಿ, ಮುಖಂಡರಾದ ಹನುಮಂತಪ್ಪ ಬಿಂಗಿ, ಬಸವರಾಜ ಹಕ್ಕಿ, ನಾಗರಾಜ ಹಕ್ಕಿ, ಭರಮಪ್ಪ ಕಂಡೇಕಾರ, ಚಂದಪ್ಪ ಹಕ್ಕಿ, ರಮೇಶ ಬಿಂಗಿ, ದ್ಯಾಮಣ್ಣ ಬಿಂಗಿ ಇತರರಿದ್ದರು.