ಜಿಲ್ಲೆ

ಯರಗೇರಾದಲ್ಲಿ ಶ್ರೀ ಭೀಮಾಂಬಿಕಾ ದೇವಿ ಜಾತ್ರೆ ಅದ್ದೂರಿ

ಹನುಮಸಾಗರ: ಯರಗೇರಾ ಗ್ರಾಮದಲ್ಲಿ ಗುರುವಾರ ಶ್ರೀ ಭೀಮಾಂಬಿಕಾ ದೇವಿ ಜಾತ್ರೆ ವಿಜೃಂಭನೆಯಿಂದ ಜರುಗಿತು. ಸದಾಶಿವ ಮಹಾಂತ ಶ್ರೀಗಳ ನೇತೃತ್ವದಲ್ಲಿ ಬೆಳಗ್ಗೆ ದೇವಿಯ ನೂತನ ಮೂರ್ತಿ ಪ್ರತಿಷ್ಠಾಪಿಸಲಾಯಿತು.

ದೇವಸ್ಥಾನದಲ್ಲಿ ಹೋಮ, ಹವನ, ಅಭಿಷೇಕ, ಕುಂಕುಮಾರ್ಚನೆ, ಪಂಚಾಮೃತ, ಮಹಾಮಂಗಳಾರತಿ, ನೈವೇದ್ಯ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀ ಭೀಮಾಂಬಿಕಾ ದೇವಿಯ ಮೂರ್ತಿ ಮೆರವಣಿಗೆ ಮಾಡಲಾಯಿತು.

ಸಂಜೆ ಸಾವಿರಾರು ಭಕ್ತರ ಸಮುಖದಲ್ಲಿ ಉಚ್ಚಾಯ ಎಳೆಯಲಾಯಿತು. ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್, ಗ್ರಾಮಕ್ಕೆ ಭೇಟಿ ನೀಡಿ ದೇವಿ ದರ್ಶನ ಪಡೆದರು. ಪ್ರಮುಖರಾದ ಲಕ್ಷ್ಮಣ ಹೂಗಾರ, ಸುಭಾಸ ಈಳಗೇರ, ಧರ್ಮಣ್ಣ ಗಡಾದ, ಬಸವರಾಜ ಶೆಟ್ಟರ, ಮಹೇಶ ನೆರತೆಲಿ, ರಾಜಪ್ಪ ತಳವಾರ, ಈರಪ್ಪ ಕಲ್ಯಾಣಿ, ಹನುಮಂತ ಈಳಗೆರ, ಮುತ್ತು ಸೂಡಿ, ಸಿದ್ದಯ್ಯ ಹಿರೇಮಠ, ರಮೇಶ ಹಾಳೂರ, ಸಂತೋಷ ಈಳಗೇರ ಇತರರಿದ್ದರು.