ಜಿಲ್ಲೆ

ಸರ್ವಜ್ಞ ವಿಚಾರಧಾರೆಗಳ ಸರ್ವಕಾಲಕ್ಕೂ ಪ್ರಸ್ತುತ

ಪ್ರವೀಣ ಉದುಸಾ ದಲಬಂಜನ್

ಹನುಮಸಾಗರ: ಸಾಮಾನ್ಯ ಜನರಿಗೆ ಅರ್ಥವಾಗುವ ರೀತಿಯಲ್ಲಿ ತ್ರಿಪದಿಗಳನ್ನು ರಚನೆ ಮಾಡುವ ಮೂಲಕ ಸಮಾಜದಲ್ಲಿರುವ ಅಂಕುಡೊಂಕುಗಳನ್ನು ತಿದ್ದುವ ಕಾರ್ಯವನ್ನು ಕವಿ ಸರ್ವಜ್ಞ ಮಾಡಿದ್ದಾರೆ ಎಂದು ಬಿಜೆಪಿ ತಾಲೂಕು ಮಾಜಿ ಅಧ್ಯಕ್ಷ ಬಸವರಾಜ ಹಳ್ಳೂರ ಹೇಳಿದರು.

ಪಟ್ಟಣದ 4ನೇ ವಾರ್ಡ್‌ನ ಕುಂಬಾರ ಓಣಿಯಲ್ಲಿ ಗುರುವಾರ ಸರ್ವಜ್ಞ ಜಯಂತಿ ಅಂಗವಾಗಿ ತ್ರಿಪದಿ ಕವಿ ಸರ್ವಜ್ಞ ಮೂರ್ತಿಗೆ ಪೂಜೆ ಸಲ್ಲಿಸಿ ಮಾತನಾಡಿದರು. ಗದ್ಯ, ಪದ್ಯಗಳು ಜನರಿಗೆ ಅರ್ಥ ಮಾಡಿಕೊಳ್ಳಲು ಕಷ್ಟವಾಗುತ್ತದೆ ಎಂದು ಸರ್ವಜ್ಞ ಅತ್ಯಂತ ಸರಳವಾಗಿ ಮೂರು ಸಾಲುಗಳಲ್ಲಿ ತ್ರಿಪದಿ ರಚಿಸುತ್ತಿದ್ದರು. ಆ ಮೂಲಕ ಸಮಾಜದಲ್ಲಿರುವ ಮೌಢ್ಯ, ಜಾತಿ ಪದ್ಧತಿ, ಅಸಮಾನತೆಯನ್ನು ಹೋಗಲಾಡಿಸಲು ಸರ್ವಜ್ಞರು ಶ್ರಮಿಸಿದ್ದಾರೆ. ಅವರ ವಿಚಾರಧಾರೆಗಳ ಸರ್ವಕಾಲಕ್ಕೂ ಪ್ರಸ್ತುತವಾಗಿವೆ ಎಂದರು.

ಗ್ರಾಪಂ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ, ಗ್ರಾಪಂ ಸದಸ್ಯರಾದ ಶಿವಪ್ಪ ಕಂಪ್ಲಿ, ಮರೇಗೌಡ ಬೋದುರ, ಮುಖಂಡರಾದ ನಾಗರಾಜ ಕಂದಗಲ, ಮೌಲಾಲಿ ಮೋಟಗಿ, ಮಹಾಂತಯ್ಯ ಕೋಮಾರಿ, ಜಗದೀಶ ಕುಂಬಾರ, ಶರಣಪ್ಪ ಕುಂಬಾರ, ಕಳಕಪ್ಪ ನಿರ್ವಾಣಿ, ಚಂದಾಲಿಂಗಪ್ಪ ಕುಂಬಾರ, ಅಡಿವೆಪ್ಪ ಕುಂಬಾರ, ರಮೇಶ ಕುಂಬಾರ, ಮಾಹಾತೇಶ ಕುಂಬಾರ, ಶೇಖಪ್ಪ ಕುಂಬಾರ, ಬಾಶುಸಾಬ ಮುಜಾವರ, ಬಸವರಾಜ ಕುಂಬಾರ ಇತರರಿದ್ದರು.

ಇಲ್ಲಿನ ಗ್ರಾಪಂ ಕಚೇರಿಯಲ್ಲಿ, ಸಮೀಪದ ಮಿಯ್ಯಪೂರ ಸಹಿಪ್ರಾ ಶಾಲೆಯಲ್ಲಿ ಸೇರಿ ವಿವಿಧ ಶಾಲಾ ಕಾಲೇಜು ಹಾಗೂ ಸರ್ಕಾರಿ ಕಚೇರಿಗಳಲ್ಲಿ ತ್ರಿಪದಿ ಕವಿ ಸರ್ವಜ್ಞ ಜಯಂತಿ ಆಚರಿಸಲಾಯಿತು.