ಹನುಮಸಾಗರದ ಕೆಪಿಎಸ್ ಬಾಲಕರ ಸರ್ಕಾರಿ ಪ್ರೌಢ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ತಿಪ್ಪಣ್ಣ ಪಾಲಕಾರ ಅವರಿಗೆ ಕೊಪ್ಪಳದಲ್ಲಿ ನಡೆದ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಪ್ರಶಸ್ತಿ ಪತ್ರ ಹಾಗೂ ಪದಕ ನೀಡಿ ಗೌರವಿಸಲಾಯಿತು. ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷ ನಾಗರಾಜ ಆರ್. ಜುಮ್ಮನ್ನವರ, ಕ್ರೀಡಾ ಇಲಾಖೆ ಎಡಿ ವಿಠ್ಠಲ್ ಜಾಬಗೌಡರ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎ. ಬಸವರಾಜ ಇತರರಿದ್ದರು.  
ಜಿಲ್ಲೆ

ಸ.ನೌ.ಕ್ರೀಡಾಕೂಟದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

ಹನುಮಸಾಗರ: ಪಟ್ಟಣದ ಕೆಪಿಎಸ್ ಬಾಲಕರ ಸರ್ಕಾರಿ ಪ್ರೌಢ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ತಿಪ್ಪಣ್ಣ ಪಾಲಕಾರ, ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ವಿವಿಧ ಕ್ರೀಡೆಗಳಲ್ಲಿ ಉತ್ತಮ ಪ್ರದರ್ಶನ ನೀಡಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಕೊಪ್ಪಳದ ಜಿಲ್ಲಾ ಕ್ರೀಡಾಂಗಣದಲ್ಲಿ ಮಾ.5 ಮತ್ತು 6 ರಂದು ನಡೆದ ಕ್ರೀಡಾಕೂಟದಲ್ಲಿ ತಿಪ್ಪಣ್ಣ ಪಾಲಕಾರ ವೈಯಕ್ತಿಕ ವಿಭಾಗದಲ್ಲಿ 800 ಮೀ., 1500 ಮೀ., 5 ಸಾವಿರ ಮೀ. ಓಟದಲ್ಲಿ ಪ್ರಥಮ ಸ್ಥಾನ. ಗುಂಪು ಆಟಗಳಲ್ಲಿ ಇವರು ಪ್ರತಿನಿಧಿಸಿದ್ದ 4*100 ಮೀ. ರಿಲೇ (ಪ್ರಥಮ), ಬಾಲ್ ಬ್ಯಾಡ್ಮಿಂಟನ್ (ಪ್ರಥಮ) ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇನ್ನೂ ಖೋಖೋ, 4*400 ಮೀ. ರಿಲೇಯಲ್ಲಿ (ದ್ವಿತೀಯ) ಸ್ಥಾನ ಪಡೆದುಕೊಂಡಿದ್ದಾರೆ