1) ಹನುಮಸಾಗರದ ಗ್ರಾಪಂನಲ್ಲಿ ಕೆಂಪೇಗೌಡ ಜಯಂತಿ ಆಚರಿಸಲಾಯಿತು. ಗ್ರಾಪಂ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ, ಪಿಡಿಒ ನಿಂಗಪ್ಪ ಮೂಲಿಮನಿ, ಸದಸ್ಯರು, ಸಿಬ್ಬಂದಿ ಹಾಗೂ ಊರಿನ ಮುಖಂಡರಿದ್ದರು. 
ಜಿಲ್ಲೆ

ವೈಜ್ಞಾನಿಕವಾಗಿ ಬೆಂಗಳೂರು ನಿರ್ಮಾಣ

ಹನುಮಸಾಗರ: ಬೆಂಗಳೂರು ವಿಶ್ವದೆಲ್ಲೆಡೆ ತನ್ನದೇಯಾದ ಮಹತ್ವ ಪಡೆದುಕೊಳ್ಳಲು ನಾಡಪ್ರಭು ಕೆಂಪೇಗೌಡರ ದೂರದೃಷ್ಟಿ ಕಾರಣ ಎಂದು ಪಿಡಿಒ ನಿಂಗಪ್ಪ ಮೂಲಿಮನಿ ಹೇಳಿದರು.

ಇಲ್ಲಿನ ಗ್ರಾಪಂ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡ ಜಯಂತಿಯಲ್ಲಿ ಮಾತನಾಡಿದರು. ಕೆಂಪೇಗೌಡ ಬೆಂಗಳೂರನ್ನು ವೈಜ್ಞಾನಿಕವಾಗಿ ನಿರ್ಮಾಣ ಮಾಡಿದ್ದಾರೆ. ಅವರ ತತ್ವಾದರ್ಶಗಳನ್ನು ಯುವಕರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.ಗ್ರಾಪಂ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ, ಗ್ರಾಪಂ ಸದಸ್ಯರಾದ ಭವಾನಿಸಾ ಪಾಟೀಲ್, ಬಸವರಾಜ ದ್ಯಾವಣ್ಣನವರ, ಮಂಜುನಾಥ ಹುಲ್ಲೂರ, ರಿಯಾಜ್ ಖಾಜಿ, ರಮೇಶ ಬಡಿಗೇರ ಇತರರಿದ್ದರು.