ಹನುಮಸಾಗರ ಸಮೀಪದ ಮುದುಟಗಿ ಗ್ರಾಮದ ಸಹಿಪ್ರಾ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಅಡವಿಭಾವಿ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟವನ್ನು ಸಿಆರ್‌ಪಿ ಅಯ್ಯಪ್ಪ ಸುರುಳ ಉದ್ಘಾಟಿಸಿದರು. ಎಸ್ಡಿಎಂಸಿ ಅಧ್ಯಕ್ಷ ನೀಲಪ್ಪ ನಾಯ್ಕ, ಗ್ರಾಪಂ ಸದಸ್ಯರಾದ ಯಮನಪ್ಪ ಬಿಂಗಿ, ಶೇಖರಪ್ಪ ಜಗ್ಗಲ್, ಮುಖ್ಯಶಿಕ್ಷಕ ಬಸವರಾಜ ಕೊಡಗಲಿ ಇತರರಿದ್ದರು. 
ಜಿಲ್ಲೆ

ಬೌದ್ಧಿಕ-ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ

ಶ್ರೀನಾಥ

ಹನುಮಸಾಗರ: ಕ್ರೀಡೆಯು ಮಕ್ಕಳ ಶೈಕ್ಷಣಿಕ ಹಾಗೂ ಸಾಮಾಜಿಕ ಜೀವನದ ಅವಿಭಾಜ್ಯ ಅಂಗ ಎಂದು ಸಿಆರ್‌ಪಿ ಅಯ್ಯಪ್ಪ ಸುರುಳ ಹೇಳಿದರು.

ಸಮೀಪದ ಮುದುಟಗಿ ಸಹಿಪ್ರಾ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಡವಿಭಾವಿ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ಕ್ರೀಡೆ ಇಲ್ಲದ ಜೀವನ ಕೀಟ ತಿಂದ ಹಣ್ಣಿನಂತೆ.

ಮಕ್ಕಳ ಬೌದ್ಧಿಕ ಮತ್ತು ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿಯಾಗಿದ್ದು, ಮಕ್ಕಳು ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು. ಕ್ರೀಡೆಗೆ ಮಹತ್ವ ಕೊಟ್ಟು ಇಲ್ಲಿ ವಿಜೇತರಾದವರನ್ನು ಮುಂದಿನ ಹಂತಕ್ಕೆ ಕಳುಹಿಸೋಣ ಎಂದರು.

ಎಸ್ಡಿಎಂಸಿ ಅಧ್ಯಕ್ಷ ನೀಲಪ್ಪ ನಾಯ್ಕ ಮಾತನಾಡಿ, ಕ್ರೀಡೆಯಲ್ಲಿ ಭಾಗಿಯಾದ ಎಲ್ಲ ಮಕ್ಕಳು ನಮ್ಮವರೆಂಬ ಮನೋಭಾವದಿಂದ ನಾವೆಲ್ಲರೂ ಪ್ರೋತ್ಸಾಹ ಕೊಡಬೇಕು.

ಯಾವುದೇ ರೀತಿಯ ಬೇಧ ಮಾಡಬಾರದು ಎಂದರು. ಗ್ರಾಪಂ ಸದಸ್ಯರಾದ ಯಮನಪ್ಪ ಬಿಂಗಿ, ಶೇಖರಪ್ಪ ಜಗ್ಗಲ್, ಮುಖ್ಯ ಶಿಕ್ಷಕ ಬಸವರಾಜ ಕೊಡಗಲಿ, ಕ್ಲಸ್ಟರ್ ವ್ಯಾಪ್ತಿಯ ವಿವಿಧ ಶಾಲೆಗಳ ಶಿಕ್ಷಕರು ಇತರರಿದ್ದರು.