ಹನುಮಸಾಗರದ ಸಮೀಪದ ಬಾದಿಮನಾಳ ಗ್ರಾಮದ ಕನಕಗುರು ಪೀಠದಲ್ಲಿ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಸಮಾರಂಭವನ್ನು ತಿಂಥಣಿ ಬ್ರಿಜ್ ಕನಕಗುರು ಪೀಠದ ಸಿದ್ದರಾಮಾನಂದ ಸ್ವಾಮೀಜಿ ಉದ್ಘಾಟಿಸಿದರು. ಶಿವಸಿದ್ದೇಶ್ವರ ಸ್ವಾಮೀಜಿ, ಹಾಲುಮತ ಸಮುದಾಯದ ತಾಲೂಕಾಧ್ಯಕ್ಷ ಮಲ್ಲಣ್ಣ ಪಲ್ಲೇದ, ಪ್ರಮುಖರಾದ ಮಹಾಂತೇಶ ಗಣವರಿ, ಸತ್ಯಪ್ಪ ರಾಜೂರ, ಎಚ್.ಎಂ.ಗೌಡ್ರು, ಅಶೋಕ್ ವಾಲಿಕಾರ, ರವಿ ಪರಸಾಪೂರ ಇತರರಿದ್ದರು.  
ಜಿಲ್ಲೆ

ಹಿರಿಯರ ಮಾರ್ಗದರ್ಶನದಲ್ಲಿ ನಡೆಯಿರಿ

ಕುರುವತ್ತಿ ಶ್ರೀಕಾಂತಪ್ಪ

ಹನುಮಸಾಗರ: ಸಾಮೂಹಿಕ ವಿವಾಹಗಳಿಂದ ಸಾಮಾಜಿಕ ಸಾಮರಸ್ಯ ಬೆಳೆಯುತ್ತದೆ ಎಂದು ತಿಂಥಣಿ ಬ್ರಿಜ್ ಕನಕಗುರು ಪೀಠದ ಸಿದ್ದರಾಮಾನಂದ ಸ್ವಾಮೀಜಿ ಹೇಳಿದರು.

ಸಮೀಪದ ಬಾದಿಮನಾಳ ಗ್ರಾಮದ ಕನಕ ಗುರು ಪೀಠದಲ್ಲಿ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಶನಿವಾರ ಮಾತನಾಡಿದರು.

ಸಾಮೂಹಿಕ ವಿವಾಹದಿಂದ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳು ಸಾಲದ ಸುಳಿಯಿಂದ ತಪ್ಪಿಸಿಕೊಳ್ಳಲು ಸಾಧ್ಯ. ಸತಿಪತಿಗಳು ಸಾಮರಸ್ಯದಿಂದ ಜೀವನ ನಡೆಸಬೇಕು. ಕಷ್ಟ ಸುಖದಲ್ಲಿ ತಾಳ್ಮೆಯಿಂದ ಇರಬೇಕು. ಮನೆಯ ಹಿರಿಯ ಜೀವಗಳನ್ನು ಗೌರವದಿಂದ ಕಂಡು, ಅವರ ಮಾರ್ಗದರ್ಶನದಲ್ಲಿ ಸಂಸಾರ ನಡೆಸಬೇಕು. ಮಕ್ಕಳಿಗೆ ಒಳ್ಳೆಯ ಸಂಸ್ಕಾರ, ಉತ್ತಮ ಶಿಕ್ಷಣ ನೀಡಬೇಕು.

ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಬೇಕು. ಮಾನವ ಕುಲ ದೊಡ್ಡದು. ದಾನ ಧರ್ಮ ಕಾರ್ಯಗಳನ್ನು ಮಾಡಬೇಕು. ದಾನಿಗಳಿಂದಲೇ ಮಠ ಅಭಿವೃದ್ಧಿಯಾಗುತ್ತದೆ ಎಂದರು.

ಬಾದಿಮನಾಳ ಕನಕಗುರು ಪೀಠದ ಶಿವಸಿದ್ದೇಶ್ವರ ಸ್ವಾಮೀಜಿ, ಹಾಲುಮತ ಸಮುದಾಯದ ತಾಲೂಕಾಧ್ಯಕ್ಷ ಮಲ್ಲಣ್ಣ ಪಲ್ಲೇದ, ಪ್ರಮುಖರಾದ ಮಹಾಂತೇಶ ಗಣವರಿ, ಸತ್ಯಪ್ಪ ರಾಜೂರ, ಎಚ್.ಎಂ.ಗೌಡ್ರು, ಅಶೋಕ್ ವಾಲಿಕಾರ, ರವಿ ಪರಸಾಪೂರ, ರಾಮಣ್ಣ ಅಳ್ಳೊಳ್ಳಿ, ಕಳಕಪ್ಪ ಕ್ಯಾದಗುಂಪಿ, ಭರಮಪ್ಪ ಪರಸಾಪೂರ, ಭೀಮಣ್ಣ ಅಳ್ಳೋಳ್ಳಿ ಇತರರಿದ್ದರು.