ಹನುಮಸಾಗರದ ಕೂಸಿನ ಮನೆಗೆ ಮೊಬೈಲ್ ಕ್ರಷ್ ಸಂಸ್ಥೆ ಅಧಿಕಾರಿಗಳ ತಂಡ ಮಂಗಳವಾರ ಭೇಟಿ ನೀಡಿ ಸೌಲಭ್ಯ ಹಾಗೂ ದಾಖಲೆಗಳನ್ನು ಪರಿಶೀಲಿಸಿತು. ನೋಡಲ್ ಅಧಿಕಾರಿ ರಾಜಶೇಖರ, ಪಿಡಿಒ ನಿಂಗಪ್ಪ ಮೂಲಿಮನಿ, ಗ್ರಾಪಂ ಕಾರ್ಯದರ್ಶಿ ಅಮರೇಶ ಕರಡಿ, ದ್ವಿತೀಯ ದರ್ಜೆ ಲೆಕ್ಕ ಸಹಾಯಕ ವೀರನಗೌಡ ಪಾಟೀಲ್, ಗ್ರಾಪಂ ಸದಸ್ಯ ಮಂಜುನಾಥ ಹುಲ್ಲೂರ, ಗ್ರಾಪಂ ಸಿಬ್ಬಂದಿ ವೀರೇಶ ಕೂರ್ನಾಳ, ಮಾರುತಿ ಸಾಳುಂಕಿ ಇತರರಿದ್ದರು.  
ಜಿಲ್ಲೆ

ಮಕ್ಕಳ ಆರೋಗ್ಯದ ಕಡೆ ಗಮನ ಹರಿಸಿ

ಹನುಮಸಾಗರ: ಕೂಸಿನ ಮನೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೇರ್ ಟೇಕರ್‌ಗಳು ಮಕ್ಕಳಿಗೆ ಊಟದ ಜತೆಗೆ ಆಟ ಆಡಿಸಬೇಕು ಎಂದು ಮೊಬೈಲ್ ಕ್ರಷ್ ಸಂಸ್ಥೆಯ ನೋಡಲ್ ಅಧಿಕಾರಿ ರಾಜಶೇಖರ ಹೇಳಿದರು.

ಪಟ್ಟಣದ ಕೂಸಿನ ಮನೆಗೆ ಮಂಗಳವಾರ ಭೇಟಿ ನೀಡಿ ಸೌಲಭ್ಯ ಮತ್ತು ದಾಖಲೆಗಳನ್ನು ಪರಿಶೀಲಿಸಿ ಮಾತನಾಡಿದರು. ಕೂಸಿನ ಮನೆ ಅಚ್ಚುಕಟ್ಟಾಗಿದೆ. ಆದರೆ, ಇದಕ್ಕೆ ಅವಶ್ಯವಿರುವ ಸೌಲಭ್ಯಗಳು ಬೇಕಾಗಿದೆ. ಕೇರ್ ಟೇಕರ್ ಸೂಕ್ತ ದಾಖಲೆಗಳನ್ನು ಹೊಂದಿಸಬೇಕು. ಶಿಶುಗಳಿಗೆ ಅವಶ್ಯಕತೆಯಿರುವ ಆಹಾರ ಪೂರೈಸಬೇಕು. ಊಟದ ಜತೆಗೆ ಮಕ್ಕಳಿಗೆ ಆಟ ಆಡಿಸಬೇಕು. ಆರೋಗ್ಯದ ಕಡೆ ಗಮನ ಹರಿಸಬೇಕು. ಪ್ರತಿ ನಿತ್ಯ ಮಕ್ಕಳ ಹಾಜರಾತಿ ದಾಖಲಿಸಬೇಕು ಎಂದರು.

ಪಿಡಿಒ ನಿಂಗಪ್ಪ ಮೂಲಿಮನಿ, ಗ್ರಾಪಂ ಕಾರ್ಯದರ್ಶಿ ಅಮರೇಶ ಕರಡಿ, ದ್ವಿತೀಯ ದರ್ಜೆ ಲೆಕ್ಕ ಸಹಾಯಕ ವೀರನಗೌಡ ಪಾಟೀಲ್, ಗ್ರಾಪಂ ಸದಸ್ಯ ಮಂಜುನಾಥ ಹುಲ್ಲೂರ, ಗ್ರಾಪಂ ಸಿಬ್ಬಂದಿ ವೀರೇಶ ಕೂರ್ನಾಳ, ಮಾರುತಿ ಸಾಳುಂಕಿ, ಕೂಸಿನ ಮನೆ ಸಿಬ್ಬಂದಿ ಇದ್ದರು.